ದೇಶದಲ್ಲಿ ಬಡವರ ಪ್ರಾಣ ಕಾಪಾಡಲು 65 ಸಾವಿರ ಕೋಟಿ ಬೇಕು :ರಘುರಾಮ್ ರಾಜನ್

ನವದೆಹಲಿ , ಏ 30, ದೇಶದಲ್ಲಿ ಬಡವರ ಪ್ರಾಣ,  ಜೀವನ ಪ್ರಾಣ ಕಾಪಾಡಲು  65ಸಾವಿರ ಕೋಟಿ ರೂಪಾಯಿ  ಅವಶ್ಯಕತೆ ಇದೆ  ಎಂದು ಆರ್ ಬಿಐ ಮಾಜಿ  ಗೌರ್ನರ್ , ಹಣಕಾಸು ತಜ್ಞ  ರಘುರಾಮ್ ರಾಜನ್  ಅಭಿಪ್ರಾಯಟ್ಟಿದ್ದಾರೆ.  ಕೊರೊನಾ ಬಿಕ್ಕಟ್ಟಿನಿಂದ ಮುಂದಿನ ದಿನಗಳಲ್ಲಿ ಸೃಷ್ಟಿಯಾಗಬಹುದಾದ ಆರ್ಥಿಕ ತೊಂದರೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು  ರಘುರಾಮ್ ರಾಜನ್ ಜೊತೆ ನಡೆಸಿದ  ವಿಡಿಯೋ ಸಂವಾದದಲ್ಲಿ   ಅವರು ಈ ವಿಷಯ ತಿಳಿಸಿದ್ದಾರೆ.
ಕರೋನ ಸೋಂಕಿನಿಂದ ಆರ್ಥಿಕತೆ ಮೇಲಾಗುವ ಪರಿಣಾಮ ಕುರಿತು ಮಾತನಾಡಿದ ರಘುರಾಮ್ ರಾಜನ್, ದೀರ್ಘಕಾಲದ ಲಾಕ್ಡೌನ್ನಿಂದ ಆರ್ಥಿಕತೆ ಸ್ಥಿರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಈಗಾಗಲೆ ಬಂದಿರುವ  ವರದಿಗಳ ಪ್ರಕಾರ ಜಿಡಿಪಿ ಪ್ರಮಾಣ ಪ್ರಮಾಣ  ನಿರೀಕ್ಷೆ, ಻ಂದಾಜು ಮಾಡಿರುವುದಕ್ಕಿಂತಲೂ ಬಹಳ  ಕಡಿಮೆಯಾಗಲೂ ಬಹುದು ಎಂದು  ಹೇಳಿದರು. ದೀರ್ಘಕಾಲದ ಲಾಕ್ಡೌನ್ ಹೊಂದುವುದು ಸರಳವಾಗಿ ಕಾಣಿಸಬಹುದು. ಆದರೆ ಇದು ನಮ್ಮ ಆರ್ಥಿಕತೆಯ ಮೆಲೆ ಬಹಳ ಪರಿಣಾಮ ಬೀರಲಿದೆ ಅದು ಸರಿಪಡಿಸಲು ಹಲವು ವರ್ಷಗಳೆ ಬೇಕಾಗಲಿವೆ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ.ಲಾಕ್ಡೌನ್ ಅನ್ನು ತೆರವುಗೊಳಿಸಬೇಕೆಂದರೆ, ಕರೋನ  ಸೋಂಕಿತರನ್ನು ಪ್ರತ್ಯೇಕವಾಗಿಡಲೇಬೇಕಾದ ಅನಿವಾರ್ಯತೆಯೂ ಇದೆ ' ಎಂದು ಅವರು ತಿಳಿಸಿದ್ದಾರೆ.
ಇದು  ಕೇವಲ  ಬಾರತದ ಮೇಲೆ ಮಾತ್ರ ಜಗತ್ತಿನ ಆರ್ಥಿಕತೆಯ ಮೇಲೂ  ಬಹಳ  ಪರಿಣಾಮ  ಬೀರಲಿದೆ ಎಎಂದೂ ಅವರು ಹೇಳಿದರು.