ಮಹಾನಂದಿಗ್ರೀನ್ ನಿರ್ದೇಶಕರಾಗಿ ರಾಘವೇಂದ್ರ ದೇಶಪಾಂಡೆ ಆಯ್ಕೆ
ಶಿಗ್ಗಾವಿ 03 : ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಂಸ್ಥೆಗಳ ಸಹಕಾರ ಸಂಘ, ಬೆಂಗಳೂರು ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾಗಿ ಶಿಗ್ಗಾವಿಯ ಮಹಾನಂದಿಗ್ರೀನ್ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ರಾಘವೇಂದ್ರ ದೇಶಪಾಂಡೆ ಅವಿರೋಧವಾಗಿ ಆಯ್ಕೆಯಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿಯವರಿಂದ ಸನ್ಮಾನಕ್ಕೊಳಪಟ್ಟರು. ಶಿಗ್ಗಾವಿಯ ಮಹಾನಂದಿಗ್ರೀನ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸಂತೋಷ ಕಟಗಿ, ನಿರ್ದೇಶಕರುಗಳಾದ ಜಗದೀಶ ತೊಂಡಿಹಾಳ, ಬಸವರಾಜ ಅಜ್ಜಂಪೂರ, ಭೀಮಣ್ಣ ನಡುವಿನಮನಿ, ವಿ ವಿ.ತೊಂಡೂರ, ಸಂತೋಷ ಹುಬ್ಬಳ್ಳಿ, ಸಂತೋಷ ಮೊರಬದ, ಶಂಭಣ್ಣ ಹಿತ್ತಲಮನಿ, ಸಂಗಯ್ಯ ಹಿರೇಮಠ, ರವಿ ಮಡಿವಾಳರ ಶುಭ ಕೋರಿರುತ್ತಾರೆ.