ಚಿಣ್ಣರರ ರಾಧಾ ಕೃಷ್ಣರ ವೇಶಭೋಷಣ ಸ್ಪಧರ್ೆ

ಲೋಕದರ್ಶವರದಿ

ಮುಧೋಳ: ಅನ್ಯಾಯ ಅಕ್ರಮ ಹಿಂಸೆ ಹೆಚ್ಚಾದಾಗಲೇ ದುಷ್ಟರ ಸಂಹಾರಕ್ಕಾಗಿ ಶ್ರೀಕೃಷ್ಣ ಹತ್ತಾರು ಅವತಾರಗಳೆತ್ತಿ  ಅಂತಹ ದುಷ್ಟರನ್ನು ವಧೆಮಾಡಿ ಶಿಷ್ಟರನ್ನು ರಕ್ಷಿಸಿದನ್ನು ನಾವಿಲ್ಲಿ ಸ್ಮರಿಸಬಹುದು, ಈ ಗುರುಕಲ ಶಾಲೆಯನ್ನು ನೋಡೊದಾಗ ಎಲ್ಲೆಡೆ ರಾಧಾ ಕೃಷ್ಣರಂತೆ  ಕಾಣುವ ಚಿಣ್ಣರರು ಈ ಗುರುಕುಲವು ನಮಗೆ ನಂದಗೋಕುಲದಂತೆ ತೋರುತ್ತದೆ. ಎಂದು ನಿವೃತ ಶಿಕ್ಷಕರಾದ ಎಲ್.ಕೆ. ಹಾದಿಮನಿ ಹೇಳಿದರು.

  ನಗರದ ಹೌಸಿಂಗ ಕಾಲನಿಯ ಗುರುಕುಲ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜಯಂತಿ ನಿಮಿತ್ತ ಹಮ್ಮಿಕೊಂಡ ಚಿಣ್ಣರರ  ರಾಧಾ ಕೃಷ್ಣರ ವೇಶಭೋಷಣ ಸ್ಪಧರ್ೆಯ ನಿಣರ್ಾಯಕರಾಗಿ ಅವರು ಮಾತನಾಡುತ್ತಿದ್ದರು.

  ಸಂಸ್ಥೆಯ ಸದಸ್ಯರಾದ  ಗಾಯತ್ರಿ ಬಿ. ಹಿಲಕುಂದ,  ಪಾಂಡುಗೌಡಾ ಬಿ.ಪಾಟೀಲ,  ಶ್ರೀಕಾಂತ ಯಂಗಿ, ಬಸವರಾಜ ಎಚ್. ಹುಲಕುಂದ, ಗುರುಮಾತೆಯರಾದ  ಸುಮಾ ಹೋರಡ್ಡಿ, ಶ್ರೀದೇವಿ ಬಿರಾದಾರ, ನೇತ್ರಾವತಿ ಬಿಳೂರ ಸೇರಿದಂತೆ  ಪಾಲಕರು  ಉಪಸ್ಥಿತರಿದ್ದರು