ಮುಂಬೈ, ಅ 24: ಬಾಲಿವುಡ್ ನಟ ಸಲ್ಮಾನ್ ಖಾನ್, ಮುಂಬರುವ ಚಿತ್ರ 'ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯಿ' ಚಿತ್ರ ತಮ್ಮ ಹಿಂದಿನ ವಾಂಟೆಡ್ ಚಿತ್ರದ ಅವತರಣಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಸಲ್ಮಾನ್, ತಮ್ಮ ಹೊಸ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದರು.
2008ರಲ್ಲಿ ಬಿಡುಗಡೆಗೊಂಡಿದ್ದ ಸಲ್ಮಾನ್ ಖಾನ್ ಅವರ ವಾಂಟೆಡ್ ಚಿತ್ರದಲ್ಲಿ ಅವರ ಹೆಸರು ರಾಧೆ ಎಂಬುದಾಗಿತ್ತು. ಆದ್ದರಿಂದ 'ರಾಧೆ-ಯುವರ್ ಮೋಸ್ಟ್ ವಾಂಟೆಡ್ ಭಾಯಿ' ಚಿತ್ರ ಅದರ ಅವತರಣಿಕೆಯಿರಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ, ಇದನ್ನು ತಿರಸ್ಕರಿಸಿರುವ ಸಲ್ಮಾನ್, ಈ ಚಿತ್ರಕ್ಕೂ 'ವಾಂಟೆಡ್' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ತಾವು ಹಿಂದೆ ನಟಿಸಿದ 'ತೇರೇ ನಾಮ್' ಚಿತ್ರದಲ್ಲಿ ಕೂಡ ತಮ್ಮ ಹೆಸರು ರಾಧೆ ಎಂಬುದೇ ಆಗಿತ್ತು ಎಂದಿದ್ದಾರೆ.
'ರಾಧೆ' ಚಿತ್ರ 2020ರ ಈದ್ ಹಬ್ಬದ ವೇಳೆ ಬಿಡುಗಡೆಯಾಗಲಿದೆ.