ದಕ್ಷಿಣ ಕನ್ನಡ, ಡಿ 17: ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಬಾಬ್ರಿ ಮಸೀದಿ ದ್ವಂಸಗೊಳಿಸಿದ ದೃಶ್ಯಗಳನ್ನು ಮರು ಸೃಷ್ಟಿಸಿ ರೂಪಕ ಪ್ರದರ್ಶನ ಸಂಬಂಧ ಕಲ್ಲಡ್ಕದ ಶ್ರೀ ರಾಮ ವಿದ್ಯಾನಿಕೇತನ ಶಾಲಾ ಆಡಳಿತ ಮಂಡಳಿಯ ನಾಲ್ವರು ಸದಸ್ಯರ ವಿರುದ್ದ ಬಂಟ್ವಾಳ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.ಶಾಲೆ ನಡೆಸುತ್ತಿರುವ ಆರ್ ಎಸ್ ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ನಾರಾಯಣ ಸೋಮಾಯಾಜಿ, ವಸಂತ ಮಹದೇವ್ ಹಾಗೂ ಚಿನ್ನಪ್ಪ ಕೋಟಿಯಾನ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ- ಪಿ ಎಫ್ ಐ ಸ್ಥಳೀಯ ಕಾರ್ಯಕರ್ತ ಅಬೂಬ್ಕರ್ ಸಿದ್ಧಿಖ್ ಸಲ್ಲಿಸಿರುವ ದೂರಿನ ಹಿನ್ನಲೆಯಲ್ಲಿ ಪೊಲೀಸರು, ಶಾಲಾ ಆಡಳಿತ ಮಂಡಳಿ ಸದಸ್ಯರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಬಂಟ್ವಾಳದ ಕಲ್ಲಡ್ಕದ ಶ್ರೀ ರಾಮ ವಿದ್ಯಾನಿಕೇತನ ಹೈಸ್ಕೂಲ್ ವಿದ್ಯಾರ್ಥಿಗಳು ಭಾನುವಾರ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆ ಉಲ್ಲಂಘಿಸಿ ಬಾಬ್ರಿ ಮಸೀದಿ ದ್ವಂಸಗೊಳಿಸಿದ್ದ ಸನ್ನಿವೇಶಗಳನ್ನು ಮರು ಸೃಷ್ಟಿಸಿ ರೂಪಕ ಪ್ರದರ್ಶಿಸಿದ್ದರು.