ಆರ್ಎಸ್ಎಸ್ ಶಾಂತತಾ ಸಭೆ ಮಾದರಿ ಪಥ ಸಂಚಲನಕ್ಕೆ ಜಿಲ್ಲಾಧಿಕಾರಿ ಕರೆ

ಬಾಗಲಕೋಟೆ: ಶಿಸ್ತು, ಸಂಯಮ ಹಾಗೂ ಆಕರ್ಷಕ ಪಥ ಸಂಚಲನಕ್ಕೆ ಹೆಸರಾದ ಬಾಗಲಕೋಟೆ ಜಿಲ್ಲೆ ಈ ಬಾರಿ ದೇಶದಲ್ಲಿಯೇ ಮಾದರಿಯಾಗುವ ರೀತಿಯಲ್ಲಿ ಪಥ ಸಂಚಲನ ನಡೆಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕರೆ ನೀಡಿದರು.

     ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರ ವಾಷರ್ಿಕೋತ್ಸವ ನಿಮಿತ್ಯವಾಗಿ ಆಚರಿಸಲ್ಪಡುವ ಈ ವಿಶಿಷ್ಟವಾದ ಪಥ ಸಂಚಲವನ್ನು ನಾಡಿನಾದ್ಯಂತ ಹಾಗೂ ದೇಶದಾದ್ಯಂತ ವೀಕ್ಷಿಸುತ್ತಿದ್ದು, ಬಾಗಲಕೋಟೆಯಲ್ಲಿ ಜರಗುವ ಈ ಪಥ ಸಂಚಲನ ಮಾದರಿಯಾಗುವ ನಿಟ್ಟಿನಲ್ಲಿ ಎಲ್ಲ ಸಮುದಾಯದವರು, ಸ್ವಯಂ ಸೇವಕರು ಹಾಗೂ ಸಾರ್ವಜನಿಕರು ಆಚರಿಸುವಂತೆ ಕರೆ ನೀಡಿದರು.

ಪಥ ಸಂಚಲನಕ್ಕೆ ತೊಂದರೆಯಾಗದಂತೆ ಪಥ ಸಂಚಲನದ ಮಾರ್ಗದಲ್ಲಿ ತಗ್ಗು, ದಿನ್ನೆ ಹಾಗೂ ಕಸಕಡ್ಡಿಗಳು ಇರದಂತೆ ಹಾಗೂ ಅಭಿಮಾನಿಗಳು ಹಾಗೂ ಪಥ ಸಂಚಲನ ಆಸಕ್ತರು ಆಕಷರ್ಿಣೆಗಾಗಿ ರಸ್ತೆಯಲ್ಲಿ ರಂಗೋಲಿ ಹಾಗೂ ಚಿತ್ತಾರಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಪಥ ಸಂಚಲನ ನಡೆಯುವ ದಾರಿಯಲ್ಲಿ ಬಿಡಾಡಿ ದನಗಳು ಹಾಗೂ ಹಂದಿಗಳು ಬರದಂತೆ ಕ್ರಮವಹಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಅಂದು ವಿದ್ಯುತ್ ಸಂಪರ್ಕ ಕಡಿಗೊಳಿಸದಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಪಥ ಸಂಚನಲದ ಎರಡು ತಂಡ ಸೇರುವ ಬಸವೇಶ್ವರ ವೃತ್ತದಲ್ಲಿ ಬ್ಯಾರಿಕೇಡ್ ಹಾಗೂ ಮಾಧ್ಯಮದವರಿಗೆ ಸುದ್ದಿ ಮಾಡಲು ಅನಿಮಾಡಿಕೊಡಬೇಕೆಂದು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಯವರಿಗೆ ತಿಳಿಸಿದರು. ಅಲ್ಲದೇ ಬಸವೇಶ್ವರ ವೃತ್ತದ ಸುತ್ತ ಮುತ್ತಲಿರುವ ಕಟ್ಟಡಗಳು ಹಳೆಯದಾಗಿದ್ದು, ಅವುಗಳ ಮೇಲೆ ಗುಂಪು ಗುಂಪಾಗಿ ಸಾರ್ವಜನಿಕರು ಹತ್ತಿ ವೀಕ್ಷಿಸುವದನ್ನು ತಡೆಯಬೇಕು ಎಂದರು. ಪಥ ಸಂಚಲನದಲ್ಲಿ ಕೇವಲ ಘನವೇಷದಾರಿಗಳ ಹೊರತು ಪಡಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಬಾರದೆಂದರು.

ಆರ್.ಎಸ್.ಎಸ್ ಮುಖಂಡ ಡಾ.ಸಿ.ಎಸ್.ಪಾಟೀಲ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ವಿಜಯದಶಮಿ ಉತ್ಸವ ನಿಮಿತ್ಯ ನಗರ ವಾಷರ್ಿಕೋತ್ಸವ ಅಂಗವಾಗಿ ನಡೆಯಲ್ಪಡುವ ಈ ಆರ್.ಎಸ್.ಎಸ್ ಪಥ ಸಂಚಲನ ಮಧ್ಯಾಹ್ನ 4 ಗಂಟೆಗೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಿಂದ ಎರಡು ಮಾರ್ಗದಿಂದ ಹೊರಡುವ ಈ ಪಥ ಸಂಚಲನ ಆಕಷರ್ಿಕವಾಗಿ ನಗರದ ಪ್ರಮುಖ ಬೀದಿಯಲ್ಲಿ ಹಾಯ್ದು ಬಸವೇಶ್ವರ ವೃತ್ತ ಸೇರಿ ಮರಳಿ ಬಿವಿವ ಸಂಘಕ್ಕೆ ಮುಕ್ತಾಯಗೊಳ್ಳುವುದೆಂದರು.

ಈ ಪಥ ಸಂಚಲನ ಇನ್ನಷ್ಟು ಆಕರ್ಷಕವಾಗಲು ಸಾರ್ವಜನಿಕರು ತಮ್ಮ ಮಕ್ಕಳಿಗೆ ದೇಶಭಕ್ತ ಉಡುಗೆಗಳನ್ನು ತೊಡಿಸಿ ನಿಲ್ಲಿಸುವದರ ಜೊತೆಗೆ ಸುಂದರ ಕಲಾಕೃತಿಗಳ ಚಿತ್ತಾರಗಳನ್ನು ಸ್ವಯಂ ಪ್ರೇರಿತರಾಗಿ ಮಾಡಲು ವಿನಂತಿಸಿದರು. ಸಂಜೆ 5.20ಕ್ಕೆ ಬವಿವ ಸಂಘದ ಮೈದಾನದಲ್ಲಿ ಭರಹಿರಂಗ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಸಿಮೇಂಟ್ ಕಾಖರ್ಾನೆಯ ವ್ಯಸ್ಥಾಪಕ ನಿದರ್ೇಶಕ ಪ್ರವಣ ಕನೋರಿಯಾ, ಮುಖ್ಯ ಭಾಷಣಕಾರರಾಗಿ ಉತ್ತರ ಕನರ್ಾಟಕ ಪ್ರಾಂಥ ಸಂಯೋಜಕ ಹನಂತ ಮಳಲಿ ಆಗಮಿಸಲಿದ್ದಾರೆಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ರಂಗಪ್ಪ, ಡಿಎಸ್ಪಿ ಎಸ್.ಬಿ.ಗಿರೀಶ, ನವನಗರದ ಪಿಎಸ್ಐ ಕೆ.ಬಿ.ಬನ್ನೂರ ಸೇರಿದಂತೆ ಮುಖಂಡರಾದ ರಾಮಕಿಸನ್ ಮುಂಡಡಾ, ಎ.ಎ.ದಂಡೀಯಾ, ವಾಯ್.ಜೆ.ಪಠಾಣ, ಐ.ಬಿ.ಚಾವೂಸ್, ಮಹಾಬಳೇಶ ಗುಡಗುಂಟಿ, ನಾಗರಾಜ ಹದ್ಲಿ, ಸಂಜು ವಾಡಕರ, ಅಶೋಕ ಮುತ್ತಿನಮಠ, ಜಿ.ಎಂ.ಟಂಕಸಾಲಿ, ರಂಗನಗೌಡ ದಂಡನ್ನವರ, ರವಿ ದಾಮಜಿ, ರೆಹಮಾನ್ಸಾಬ ದಾಲಾಯತ, ಶರಣಪ್ಪ ಗುಳೇದ ಸೇರಿದಂತೆ ಇತರರು ಉಪಸ್ಥಿತರಿದ್ದರು.