ಆರ್‌ಎಸ್‌ಎಸ್‌, ಶಿವಸೇನೆ ಉದ್ದೇಶ ಒಂದೇಯಾದ್ರು, ಆಲೋಚನಗಳು ಭಿನ್ನ: ರಾವತ್‌

RSS, Shiv Sena have same purpose, different ideas: Rawat

ಮುಂಬೈ 19: ಆರ್‌ಎಸ್‌ಎಸ್‌ ಮತ್ತು ಅವಿಭಜಿತ ಶಿವಸೇನೆ ಎರಡರ ಉದ್ದೇಶ ಹಿಂದುತ್ವವೇಯಾದರೂ ಸದಾ ಭಿನ್ನ ಆಲೋಚನಗಳನ್ನು ಹೊಂದಿವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವತ್‌ ಗುರುವಾರ ಹೇಳಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕಾನಾಥ ಶಿಂದೆ ಅವರು ಆರ್‌ಎಸ್‌ಎಸ್‌ ಮತ್ತು ಶಿವಸೇನೆಯ ಆಲೋಚನೆಗಳು ಒಂದೇ ಆಗಿದೆ ಎಂದು ಹೇಳಿದ್ದರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್‌ , ‘1975 ರಲ್ಲಿ ಶಿವಸೇನೆಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡುವಂತೆ ಪಕ್ಷದ ಸ್ಥಾಪಕ ಬಾಳಾ ಠಾಕ್ರೆ ಅವರ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಪಕ್ಷದ ಸ್ವಾತಂತ್ರ್ಯಕ್ಕೆ ಅದು ಅಡ್ಡಿಯಾಗುವುದೆಂದು ವಿಲೀನಕ್ಕೆ ಅವಕಾಶ ನೀಡಲಿಲ್ಲ ಎಂದರು.

ಏಕನಾಥ ಶಿಂದೆ ಅವರು ಗುರುವಾರ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಸ್ಥಾಪಕ ಡಾ. ಕೆ.ಬಿ. ಹೆಡಗೇವಾರ್ ಅವರ ಸ್ಮಾರಕ್ಕ ಭೇಟಿ ನೀಡಿದ್ದ ವೇಳೆ, ‘ಆರ್‌ಎಸ್‌ಎಸ್‌ ಮತ್ತು ಶಿವಸೇನೆಯ ಆಲೋಚನೆಗಳು ಒಂದೇ ಆಗಿದೆ’ ಎಂದಿದ್ದರು.