ರಿಸರ್ವ್ ಬ್ಯಾಂಕ್ ರೆಪೊ ದರ ಶೇ.0.35ರಷ್ಟು ಕಡಿತ

 ಮುಂಬೈ, ಆಗಸ್ಟ್ 7  ಭಾರತೀಯ ರಿಸರ್ವ್  ಬ್ಯಾಂಕ್ ಈ ವರ್ಷದಲ್ಲಿ ಸತತ ನಾಲ್ಕನೇ ಬಾರಿ ರೆಪೊ ದರವನ್ನು ಕಡಿತಗೊಳಿಸಿದ್ದು, ಬುಧವಾರ ದರವನ್ನು 35 ಮೂಲಾಂಕದಷ್ಟು (ಶೇ.0.35) ಕಡಿತಗೊಳಿಸಿ ಶೇ 5.40 ಕ್ಕೆ ಇಳಿಸಿದೆ. 

 ಹಾಗೆಯೇ ರಿವರ್ಸ್ ರೆಪೊ ದರ ಸದ್ಯ ಶೇ. 5.15 ರಷ್ಟಿರಲಿದೆ. 

 ಪ್ರಸಕ್ತ ಹಣಕಾಸು ವರ್ಷದ ಮೂರನೇ ದ್ವೈವಾರ್ಷಿಕ ನೀತಿಯಲ್ಲಿ ರಿಸರ್ವ್ ಬ್ಯಾಂಕ್ ಈ ಕಡಿತವನ್ನು ಮಾಡಿದೆ.  

 ಇಂದು ಇಲ್ಲಿ ಸಭೆ ಸೇರಿದ್ದ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಸಕ್ತ ಹಣಕಾಸು ವರ್ವದ ಜಿಡಿಪಿ(ಒಟ್ಟು ಆಂತರಿಕ ಉತ್ಪನ್ನ) ಪ್ರಗತಿ ಅಂದಾಜು ಶೇ.7ರಿಂದ ಶೇ.6.9ಕ್ಕೆ ಇಳಿಸಿರುವುದಾಗಿಯೂ ಘೋಷಿಸಿದೆ.  

 ರೆಪೋ ದರ, ಯಾವುದೇ ಹಣಕಾಸಿನ ಕೊರತೆಯ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ , ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ.  

 ಇದು 2019 ರಲ್ಲಿ ರಿಸರ್ವ್ ಬ್ಯಾಂಕ್ ಕಡಿತಗೊಳಿಸಿದ ಸತತ ನಾಲ್ಕನೇ ದರವಾಗಿದೆ.