ಇಎಮ್ಐ ಪಾವತಿಗೆ ಮೂರು ತಿಂಗಳ ಅವಕಾಶ ಆರ್ ಬಿ ಐ ಸಮ್ಮತಿ

ನವದೆಹಲಿ, ಮೇ   22,ಭಾರತಿಯ ರಿಸರ್ವ್ ಬ್ಯಾಂಕ್  ಶುಕ್ರವಾರ ರೆಪೋ ದರ ಪ್ರಕಟಿಸಿದ್ದು ಹಿಂದಿನ ದರದಲ್ಲಿ 40 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ.4 ನಿಗದಿಪಡಿಸಿದೆ. ಈ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ದೃಡ ಹೆಜ್ಜೆ ಇಟ್ಟಿದೆ .ರಿವರ್ಸ್ ರೆಪೋ ದರ ಸಹ ಕಡಿತಗೊಳಿಸಲಾಗಿದ್ದು ಶೇ 3.75ರಿಂದ ಶೇ.3.35ಕ್ಕೆ ನಿಗದಿಪಸಡಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಕರೋನ ಸೋಂಕಿನಿಂದಾಗಿ  ದೀರ್ಘಾವಧಿ ಸಾಲಗಳ ಮಾಸಿಕ ಕಂತು ಪಾವತಿಯನ್ನು ಮೂರು ತಿಂಗಳವರೆಗೆ ಮುಂದೂಡುವ ಅವಕಾಶ ಪ್ರಕಟಿಸಿದ್ದ ಆರ್ಬಿಐ ಇಂದು ಮತ್ತೆ ಮೂರು ತಿಂಗಳವರೆಗೂ ಆ ವ್ಯವಸ್ಥೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ. ಇಎಮ್ಐ ಪಾವತಿಗೆ ಮೂರು ತಿಂಗಳ ಅವಕಾಶಕ್ಕೆ ಆರ್ ಬಿ ಐ  ಸಮಮ್ತಿ ನೀಡಿದೆ ಎಂದು ಅವರು ಹೇಳಿದರು.