ಬೆಂಗಳೂರು, ಫೆ 17, ಟಾಲಿವುಡ್ ನಲ್ಲಿ ಮಿಂಚುತ್ತಿರುವ ಸಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ, ಪ್ರಸ್ತುತ ‘ಭೀಷ್ಮ’ ಸಿನಿಮಾದ ಪ್ರಚಾರಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇದೇ 21ರಂದು ‘ಭೀಷ್ಮ’ ಬಿಡುಗಡೆಯಾಗುತ್ತಿದ್ದು, ಇದೇ ಸಂಭ್ರಮದಲ್ಲಿ ತೇಲುತ್ತಿರುವ ರಶ್ಮಿಕಾ ಹಾಗೂ ಚಿತ್ರದ ನಾಯಕ ನಟ ನಿತಿನ್ ಖಾಸಗಿ ದೃಶ್ಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಿದ್ದ ವೇಳೆ ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ನುವ ವಿಚಾರವನ್ನು ನಿತಿನ್ ಬಯಲು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಇಷ್ಟಕ್ಕೂ ಆಗಿದ್ದೇನು ಗೊತ್ತಾ. . . ರಶ್ಮಿಕಾ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿ ಹೇಳಲು ಹೊರಟ ನಿತಿನ್, “ಸಂಜೆ ವೇಳೆ ನಾವೆಲ್ಲ ಬ್ರೆಡ್, ದೋಸೆ ತಿಂದ್ರೆ ರಶ್ಮಿಕಾ ನಾಯಿ ಬಿಸ್ಕೆಟ್ ತಿಂತಾರೆ” ಎಂದಿದ್ದಾರೆ ನಾಯಿ ಬಿಸ್ಕೆಟ್ ವಿಷಯ ಹೇಳಬೇಡಿ ಎಂದು ರಶ್ಮಿಕಾ ಎಷ್ಟೇ ತಡೆದರೂ ನಿತಿನ್ ಸುಮ್ಮನಾಗಿಲ್ಲ ಬಳಿಕ ಸ್ಪಷ್ಟನೆ ನೀಡಿರುವ ರಶ್ಮಿಕಾ, “ನಮ್ಮನೆ ನಾಯಿ ಬಹಳ ಇಷ್ಟಪಟ್ಟು ನಾಯಿ ಬಿಸ್ಕೆಟ್ ತಿನ್ನುತ್ತಿತ್ತು ಹೀಗಾಗಿ ಅದೆಷ್ಟು ರುಚಿ ಯಿರಬಹುದು ಅಂತಾ ಪರೀಕ್ಷೆ ಮಾಡೋದಿಕ್ಕೆ ಒಂಚೂರು ಟೇಸ್ಟ್ ಮಾಡಿದ್ದೆ ಈ ವಿಷಯವನ್ನು ನಿತಿನ್ ಜತೆ ಹಂಚಿಕೊಂಡಿದ್ದೆ” ಅಂತ ಹೇಳಿದ್ದಾರೆ ಏನೇ ಆಗ್ಲಿ, ರಶ್ಮಿಕಾ ನಾಯಿ ಬಿಸ್ಕೆಟ್ ತಿಂದ ವಿಚಾರ ಎಲ್ಲೆಡೆ ಹರಿದಾಡ್ತಿದ್ದು, ಆಕೆ ಮುಜುಗರ ಎದುರಿಸುವಂತಾಗಿದೆ.