ವೈದ್ಯರಿಗೆ ಸೂಕ್ತ ರಕ್ಷಣೆ ಕೋವಿಡ್ ಉಸ್ತುವಾರಿ ಆರ್ ಅಶೋಕ ಅಭಯ

ಬೆಂಗಳೂರು ಜೂನ್ 29: ಬೆಂಗಳೂರು  ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿಯಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿವಿಕ್ಟೋರಿಯಾ ಆಸ್ಪತ್ರೆ, ಹಜ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಿ  ಕೋವಿಡ್ ಉಸ್ತುವಾರಿ ಆರ್ ಅಶೋಕ್ ಹೇಳಿದ್ದಾರೆ. ಕೆಲವು ಕಡೆ ಹೋಟೆಲ್ ಗಳಲ್ಲಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆಗೃಹ ಸಚಿವರ ಜೊತೆ ಮಾತನಾಡಿ ವೈದ್ಯರಿಗೆ ಸೂಕ್ತ ರಕ್ಷಣೆ ಕೊಡಬೇಕು  ಮುಂದೆ ಇಂತಹ ಪ್ರಕರಣ ವರದಿಯಾಗದಂತೆ  ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ  ಎಂದರು. ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಸಿಬ್ಬಂದಿ  ಆರು ತಿಂಗಳು ಕಾಲ ಕೆಲಸ ಮಾಡೋದಕ್ಕೆ ಮಾನಸಿಕರಾಗಿ ಸಿದ್ದವಾಗಬೇಕು ಅಂತ ಸೂಚನೆ ಕೊಟ್ಟಿದ್ದೇನೆ  ಡಾಕ್ಟರ್ ಗಳ ಅಗತ್ಯತೆ ಕೂಡ ಹೆಚ್ಚಾಗಿದೆ ಎಂದರು.

ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಲು,  ಚಿಕಿತ್ಸೆ ವಿವರ ನೀಡಲು ಸಾರ್ವಜನಿಕ ಸಂಪರ್ಕಾಧಿಕಾರಿ ನಿಯೋಜನೆ ಮಾಡುವುದಕ್ಕೂ  ಸೂಚನೆ ನಿಡಲಾಗಿದೆ ಎಂದರು. ಖಾಸಗಿ ಆಸ್ಪತ್ರೆಗಳಲ್ಲಿ ಟೆಸ್ಟ್ ಮಾಡಿದ ನಂತರ  ಪಾಸಿಟಿವ್ ಎಂಬ ವರದಿ ಬಂದರೆ ಅವರು ತಕ್ಷಣ  ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕುಆಗ ನಾವು ರೋಗಿಯನ್ನ ಯಾವ ರೀತಿ ಕರೆದುಕೊಂಡು ಬರಬೇಕು ಎಂಬುದನ್ನು  ಮನವರಿಕೆ ಮಾಡಿಕೊಡುವುದಾಗಿ ಹೇಳಿದರು. ಡಾಕ್ಟರ್ ಗಳು ವಾರ್ಡ್ ಗಳಿಗೆ ಹೋಗುವುದಿಲ್ಲ ಅಂತ ದೂರು  ಬಂದಿದೆ ಪ್ಯಾರಾಮೆಡಿಕಲ್ ಸ್ಟಿಕರ್ ಗಳನ್ನ ಹಾಕಿಕೊಂಡು  ಹೋಗಬೇಕು ಕೆಲವು ಕಡೆ ಹೋಟೆಲ್ ಗಳಲ್ಲಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ ವಿಕ್ಟೋರಿಯಾದಲ್ಲಿ ಎಲ್ಲಾ ಬೆಡ್ ಗಳಿಗೆ ನಂಬರಿಂಗ್ ಮಾಡಲಾಗಿದೆ ಎಂದರು. ಕೆಲವು ಕಡೆ ಹೋಟೆಲ್ ಗಳಲ್ಲಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ ಎಂಬ ದೂರಿನ  ಹಿನ್ನಲೆಯಲ್ಲಿ ಗೃಹ ಸಚಿವರ ಜೊತೆ ಮಾತನಾಡಿ ವೈದ್ಯರಿಗೆ ಸೂಕ್ತ ರಕ್ಷಣೆ ಕೊಡುವಂತೆ ಹೇಳಿರುವುದಾಗಿ ಸಚಿವರು ಹೇಳಿದರು. ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪಿ.ಸಿ ಮೋಹನ್ ಉಪಸ್ಥಿತರಿದ್ದರು..