ಗದಗ 26: ಮಾನಸಿಕ ಖಿನ್ನತೆ, ತಪ್ಪು ತಿಳುವಳಿಕೆ, ಶೋಕಿಗಾಗಿ ಇಂದಿನ ಯುವಜನತೆ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ, ಮಾದಕ ವಸ್ತು ಗಳ ಸೇವನೆಯಿಂದ ವ್ಯಕ್ತಿಯ ಮಾನಸಿಕ, ದೈಹಿಕ, ಆಥರ್ಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದಕಾರಣ ಮಾದಕ ವಸ್ತುಗಳನ್ನು ತ್ಯಜಿಸಿ ಆರೋಗ್ಯವಂತ ಸಮಾಜ ನಿಮರ್ಿಸುವಲ್ಲಿ ಯುವಜನತೆ ಮುಂದಾಗಬೇಕು ಎಂದು ಗದಗ ಜಿ.ಪಂ. ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ನುಡಿದರು.
ನಗರದ ಕೆ.ವಿ.ಎಸ್.ಆರ್. ಪದವಿ ಪೂರ್ವ ವಿದ್ಯಾಲಯದ ಸಭಾ ಭವನದಲ್ಲಿಂದು ಜಿಲ್ಲಾಡಳಿತ ಜಿ.ಪಂ. ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, (ಮಾನಸಿಕ ಆರೋಗ್ಯ ವಿಭಾಗ) ಜಿಲ್ಲಾ ಪೊಲೀಸ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಾತರ್ಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರ ಇಲಾಖೆ, ಜಿಲ್ಲಾ ಕಾರಾಗೃಹ, ಕೆ.ವಿ.ಎಸ್.ಆರ್. ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ತಾಲೂಕಾ ಆರೊಗ್ಯಾಧಿಕಾರಿಗಳ ಕಾರ್ಯಾಲಯ, ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ "ಆರೋಗ್ಯಕ್ಕಾಗಿ ನ್ಯಾಯ, ನ್ಯಾಯಕ್ಕಾಗಿ ಆರೊಗ್ಯ "ಎಂಬ ಘೋಷವಾಕ್ಯದಡಿ ಏರ್ಪಡಿಸಲಾಗಿದ್ದ್ದ ಅಂತರ್ರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ಸೇರಿದಂತೆ ಪ್ರತಿಯೊಬ್ಬರೂ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಕುರಿತು ತಮ್ಮ ಸುತ್ತಮುತ್ತಲಿನ ಸಮಾಜದವರಿಗೆ ಜಾಗೃತಿ ಮೂಡಿಸಬೇಕು. ಮನೆಯಲ್ಲಿ ಪಾಲಕರು ಈ ಕುರಿತು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಶಕುಂತಲಾ ಮೂಲಿಮನಿ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಜಿ.ಎಸ್. ಸಲಗರೆ ಅವರು ಮಾತನಾಡಿ ವಿದ್ಯಾಥರ್ಿಗಳು ಕೆಲವರ ಸಹವಾಸದಿಂದ, ಶೋಕಿಗಾಗಿ, ಮತ್ತೊಬ್ಬರನ್ನು ಅನುಕರಣೆ ಮಾಡುವುದರಿಂದ ಮಾದಕ ವ್ಯಸನಿಗಳಾಗುತ್ತಾರೆ. ಮಾದಕ ವಸ್ತುಗಳ ಸೇವನೆಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದಲ್ಲದೇ ಮಾದಕ ವ್ಯಸನಿಗಳು ಅನೇಕ ರೋಗಗಳಿಗೆ ಬಲಿಯಾಗುತ್ತಾರೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಯಾವುದೇ ಔಷಧಿಗಳನ್ನು ರೋಗಿಗಳು ಸೇವನೆ ಮಾಡಬಾರದು. ಇದೂ ಕೂಡ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಿ.ಎಸ್. ಸಲಗರೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಅವರು ಮಾತನಾಡಿ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಿಶ್ವ ಮಾದಕ ವರದಿ-2018 ರ ಪ್ರಕಾರ ಜಗತ್ತಿನಾದ್ಯಂತ 275 ದಶಲಕ್ಷ ಜನರು ಮಾದಕ ವಸ್ತುಗಳ ದಾಸರಾಗಿದ್ದಾರೆ. 13.8 ದಶಲಕ್ಷ ಜನರು (15 ರಿಂದ 16 ವರ್ಷ ವಯೋಮಾನ) ಸಾಮಾನ್ಯ ಮಾದಕ ವಸ್ತುವಾದ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಉಪಯೋಗಿಸುತ್ತಿದ್ದಾರೆ. 192 ದಶಲಕ್ಷ ಜನರು ಗಾಂಜಾವನ್ನು ಉಪಯೋಗಿಸುತ್ತಿದ್ದಾರೆ. ಚುಚ್ಚುಮದ್ದಿನ ಮಾದಕ ವಸ್ತುಗಳನ್ನು ಉಪಯೋಗಿಸುವವರಲ್ಲಿ 13 ದಶಲಕ್ಷ ಜನರು ಎಚ್.ಐ.ವಿ ಸೋಂಕಿಗೆ ಬಲಿಯಾಗಿದ್ದಾರೆ. ಮಾದಕ ವಸ್ತುಗಳ ಬಳಕೆ ತಡೆಗಟ್ಟಿ ಆರೋಗ್ಯವಂತ ಸಮಾಜ ನಿಮರ್ಾಣಕ್ಕೆ ಇಲಾಖೆಯ ಅಧಿಕಾರಿಗಳು, ವಿದ್ಯಾಥರ್ಿಗಳು, ಸಮುದಾಯದವರೂ ಕೂಡ ಕೈಜೋಡಿಸಬೇಕಾಗಿದೆ. ಎಂದು ಡಾ. ವಿರುಪಾಕ್ಷರೆಡ್ಡಿ ಮಾದಿನೂರ ತಿಳಿಸಿದರು.
ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯರಾದ ಡಾ. ಸೋಮಶೇಖರ ಬಿಜ್ಜಳ ಅವರು ಉಪನ್ಯಾಸ ನೀಡಿ ಪ್ರತಿಯೊಬ್ಬ ನಾಗರಿಕನಿಗೂ ಆರೋಗ್ಯ ನೀಡಬೇಕಾದದ್ದು ಸಮಾಜ ಹಾಗೂ ಸಮುದಾಯದ ಕರ್ತವ್ಯ. ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ದೈಹಿಕ, ಸಾಮಾಜಿಕ, ಕೌಟುಂಬಿಕ ಸ್ವಾಸ್ಥ್ಯವನ್ನು ಹಾಳು ಮಾಡಿ ಒಂದು ದೇಶದ ಆಥರ್ಿಕ ಅಭಿವೃದ್ಧಿಯನ್ನೇ ಬುಡಮೇಲು ಮಾಡುತ್ತದೆ. ಗಾಂಜಾ, ಚರಸ್, ಕೋಕೇನ್, ಗ್ರಾಸ್, ಗುಟಕಾ, ಸಿಗರೇಟು, ಮದ್ಯಪಾನ, ಮುಂತಾದವುಗಳು ಮಾದಕ ವಸ್ತುಗಳಾಗಿದ್ದು ಜೀವನದಲ್ಲಿ ಹತಾಶರಾದವರು, ಮಾನಸಿಕ ಖಿನ್ನತೆ ಹೊಂದಿದವರು, ತಪ್ಪು ತಿಳುವಳಿಕೆ ಹೊಂದಿದವರು, ಸಾಮಾಜಿಕ ಒತ್ತಡಗಳಿಗೆ ಒಳಗಾದವರು, ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಾರೆ. ಮಾದಕ ವಸ್ತುಗಳ ಸೇವನೆಯು ಎಲ್ಲಾ ರೋಗಗಳಿಗೂ ಆಹ್ವಾನಮಾಡುತ್ತದೆ. ಆದಕಾರಣ ಯುವಜನರು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು. ಮಾದಕ ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮಾಡಿ ನಂತರ ಸಮಾಜದ ಮುಖ್ಯವಾಹಿನಿಗೆ ತರಬಹುದು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಸುಜಾತಾ ಖಂಡು, ಅಬಕಾರಿ ಇಲಾಖೆಯ ಉಪ ಅಧೀಕ್ಷಕರಾದ ಸಿ.ಎನ್. ಜನಾಯ್, ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಡಾ. ಆರ್.ಸಿ. ಕೋರವನವರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ. ವೈಶಾಲಿ ಹೆಗಡೆ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ನೀಲಗುಂದ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಾಲೇಜಿನ ವಿದ್ಯಾಥರ್ಿ ವಿದ್ಯಾಥರ್ಿನಿಯರು, ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಎಚ್. ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಪ್ರಿಯಾಂಕಾ ಪ್ರಾಥರ್ಿಸಿದರು. ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ ವಂದಿಸಿದರು.