ಲೋಕದರ್ಶನರವರದಿ
ಮಹಾಲಿಂಗಪುರ; ಕಿತ್ತೂರಿನ ವೀರರಾಣಿ ಚನ್ನಮ್ಮ ಕನ್ನಡನಾಡಿನ ವೀರ ಮಹಿಳೆಯರಲ್ಲಿ ಆಗ್ರಪಂಕ್ತಿಗೆ ಸೇರಿದವಳು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸಪ್ಪ ಕೋಪ್ಪದ ಹೇಳಿದರು.
ಬುಧವಾರ ಮುಂಜಾನೆ ಸ್ಥಳೀಯ ರಾಣಿಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜ ಭಾಂಧವರು ಏರ್ಪಡಿಸಿದ ವೀರರಾಣಿ ಕಿತ್ತೂರ ಚನ್ನಮ್ಮನ ವಿಜಯೋತ್ಸವ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮನ ಭಾವಚಿತ್ರಕ್ಕೆ ಫೂಜೆ ಸಲ್ಲಿಸಿ ಮಾತನಾಡಿದ ಅವರು ಸ್ವಾತಂತ್ರ ಸ್ವಾಭಿಮಾನಗಳ ಸಕಾರ ಮೂತರ್ಿ ಕಿತ್ತೂರಿನ ರಾಣಿ ಚನ್ನಮ್ಮ, ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ದನಾದ ಮಲ್ಲಸರ್ಜನ ಕಿರಿಯ ಹೆಂಡತಿ, ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಗಟ್ಟಿತನದಿಂದ ನಿಂತು ನಡೆಸಿದ ಹೋರಾಟ ಅಲ್ಲಿ ಅವಳು ತೋರಿಸಿದ ಧರ್ಯ ಸಾಹಸ, ಕೆಚ್ಚುಗಳ ಚನ್ನಮ್ಮನ್ನನ್ನು ಅಜರಾಮರವಾದ ಕಿತರ್ಿ ಸಿಕರಕ್ಕೇರಿಸಿವೆ ಆದ್ದರಿಂದ ಚನ್ನಮ್ಮನಿಂದ ಕಿತ್ತೂರು ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಇಂಥ ಹೋರಾಟದ ಗುಣ ಎಲ್ಲ ಮಹಿಳೆಯರಲ್ಲೂ ಬರಬೇಕು ಆದ್ದರಿಂದ ಇಂಥ ಆಚರಣೆಗಳ ಮೂಲಕವಾದರೂ ನಮ್ಮ ಮಹಿಳೆಯರು ಕಿತ್ತೂರು ಚನ್ನಮ್ಮನ ತತ್ವಾದರ್ಶಗಳನ್ನ ಪಾಲೀಸಬೇಕು ಎಂದರು.
ನಂತರ ಮಾತನಾಡಿದ ಡಾ. ಎ.ಆರ್ ಬೆಳಗಲಿ ಬ್ರಿಟಿಷರಿಗೆ ಸೋಲಿನ ರುಚಿಯುನಿಸಿದ ಭಾರತದ ವೀರನಾರಿ, ಆಂಗ್ಲರ ರುಂಡ ಚಂಡಾತಿದ ವೀರವಣಿತೆ ವೀರಗತ್ತಿ ಕಿತ್ತೂರು ಚನ್ನಮ್ಮಳ ಸಾಹಸ ಇಂದಿನ ಮಹಿಳೆಯರಿಗೆ ಮಾರ್ಗದರ್ಶನವಾಗಲಿ, ಅದರೊಂದಿಗೆ ವೀರರಾಣಿ ಚನ್ನಮ್ಮನಂಥ ಮಹಿಳೆಯರು ನಮ್ಮ ಪ್ರತಿ ಮನೆ ಮನೆಯಲ್ಲಿಯೂ ಹುಟ್ಟಿ ಬರಲಿ, ಚನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ ಸ್ಟೀವನಸನ್ ಹಾಗೂ ಇಲಿಯಟ್ ಸೆರೆಯಾಳಾದರೂ ಈ ವಿಜಯೋತ್ಸವವನ್ನು ಕನರ್ಾಟಕ ಸಕರ್ಾರ ಕಿತ್ತೂರು ಉತ್ಸವ ಅನ್ನುವ ಹೆಸರಿನಲ್ಲಿ ಆಚರಣೆಗೆ ಜಾರಿಗೆ ತಂದಿದೆ, ಈ ಹಬ್ಬವನ್ನು ಪ್ರತಿವರ್ಷವು ಸಕರ್ಾರವೇ ಆಚರಣೆ ಮಾಡುತ್ತದೆ ಎಂದರು.
ತೇರದಾಳ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಬಸವರಾಜ ಪಾಟೀಲ, ಶೇಖರ ಅಂಗಡಿ, ಈರಪ್ಪ ದಿನ್ನಿಮನಿ, ಅಶೋಕ ಅಂಗಡಿ, ಎಸ್.ಎಂ ಉಳ್ಳೆಗಡ್ಡಿ, ಡಾ. ಅಶೋಕ ದಿನ್ನಿಮನಿ, ಮುಖ್ಯಾಧಿಕಾರಿ ಬಾಬುರಾವ ಕಮತಗಿ, ಹನಮಂತ ಶಿರೋಳ,ಸಂತೋಷ ಹುದ್ದಾರ, ಮಹಾಲಿಂಗಪ್ಪ ಕೌಜಲಗಿ, ಅಲ್ಲಪ್ಪ ಕಲ್ಲೋಳಿ, ಸಂಜು ಅಂಬಿ,ರಾಜೇಶ ಬಾವಿಕಟ್ಟಿ,ರವಿ ಜವಳಗಿ,ಭೀಮಸಿ ಗೌಂಡಿ, ಆನಂದ ಖೋತ, ದುಂಡಪ್ಪ ಬಂಡಿ ಸೇರಿದಂತೆ ಹಲವರು ಇದ್ದರು.