ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಗುಣಮಟ್ಟದ ಶಿಕ್ಷಣ ಅಗತ್ಯ: ಸುಷ್ಮಾ ಪತಂಗೆ
ಕೊಪ್ಪಳ 15: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೇಗಳಾಗಿದ್ದು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ಉಜ್ವಲಗೊಳ್ಳಲು ಡಿಜಿಟಲ್ ತರಗತಿಗಳು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಇನ್ನರ್ ವೀಲ್ ಕ್ಲಬ್ ಚೇರ್ಮನ್ ಸುಷ್ಮಾ ಪತಂಗೆ ಹೇಳಿದರು. ಅವರು ನಗರದ ಜಿಪಿಎಚ್‌ಎಸ್ ಶಾಲೆಯಲ್ಲಿ ಸುಮಾರು 75,000 ರೂಪಾಯಿ ಬೆಲೆ ಬಾಳುವ ಡಿಜಿಟಲ್ ತರಗತಿ ಉಪಕರಣಗಳು ಕ್ಲಬ್ ಪರವಾಗಿ ವಿತರಣೆ ಮಾಡಿ ಅದಕ್ಕೆ ಚಾಲನೆ ನೀಡಿದ ಬಳಿಕ ಏರಿ್ಡಸಿದ ಸರಳ ಸಾಂಕೇತಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಅಧುನಿಕ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಹೆಚ್ಚಿಸಲು ಡಿಜಿಟಲ್ ತರಗತಿ ಅವಶ್ಯಕತೆ ಇದೆ. ಇದರಿಂದ ಸಂವಾದಾತ್ಮಕ ಶಿಕ್ಷಣವನ್ನು ಬೆಳೆಸುತ್ತದೆ ಸಾಂಪ್ರದಾಯಿಕ ಮತ್ತು ಡಿಜಿಟಲ್ ಕಲಿಕೆಯನ್ನು ಹೆಚ್ಚು ಪ್ರೋತ್ಸಾಹಿಸಿ ದಂತಾಗುತ್ತದೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಹೊಂದಿರುವ ವಿದ್ಯಾರ್ಥಿಗಳನ್ನು ಸಬಲೀಕರಣ ಗೊಳಿಸಲು ನಮ್ಮ ಇನ್ನರ್ ವೀಲ್ ಕ್ಲಬ್ ಬದ್ಧವಾಗಿದೆ ಎಂದು ಜಿಲ್ಲಾ ಚೇರ್ಮೆನ್ ಸುಷ್ಮಾ ಪತಂಗೆ ಹೇಳಿದರು, ಸರಳ ಸಾಂಕೇತಿಕ ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ವಹಿಸಿ ಮಾತನಾಡಿ ಡಿಜಿಟಲ್ ಕಲಿಕೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಒಳ್ಳೆಯ ಅಂಕಗಳಿಸಿ ಶಾಲೆಗೆ ಕೀರ್ತಿ ತರುವಂತಾಗಬೇಕು ಮತ್ತು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸತತ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಈ ಸಮಾರಂಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ, ಮೀನಾಕ್ಷಿ ಬಣ್ಣದ ಬಾವಿ, ಉಪಾಧ್ಯಕ್ಷರಾದ ಮಧು ಶೆಟ್ಟರ್, ಖ ಜಾಂಚಿ ಆಶಾ ಕವಲೂರು, ಐ ಎಸ್ ಓ ಮಧು ನಿಲೋಗಲ್, ಎಡಿಟರ್ ನಾಗವೇಣಿ ಗರೂರು, ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಮತ್ತು ಸುಜಾತಾ ಪಟ್ಟಣಶೆಟ್ಟಿ ಸೇರಿದಂತೆ ಇತರ ಸದಸ್ಯರು ಮಹಿಳೆಯರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.