ಲೋಕದರ್ಶನ ವರದಿ
ಕಾಗವಾಡ 13: ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮಕ್ಕಳನ್ನು ಮೊಬೈಲ್, ಟಿವಿ ಈ ಮಾಧ್ಯಮಗಳಿಂದ ದೂರು ಇಡಿಸಿರಿ. ಅವರಿಗಾಗಿ ಆಸ್ತಿ ಮಾಡದೆ, ಅವರನ್ನೇ ಆಸ್ತಿ ಮಾಡಲು ಮುಂದಾಗಿರಿ. ಇಂದಿನ ವಿಜ್ಞಾನ ಮತ್ತು ಸ್ಪಧರ್ಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣದಿಂದ ಸ್ಪಧರ್ಿಸಲು ಸಾಧ್ಯವಿದೆಯೆಂದು ಕಾಗವಾಡ ಬಿಇಒ ಎ.ಎಸ್.ಜೋಡಗೇರಿ ಹೇಳಿದರು.
ದಿ.13ರಂದು ಸಂಜೆ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿಯ ಗುರು ವಿದ್ಯಾ ಆಂಗ್ಲ ಮಾಧ್ಯಮ ಶಾಲೆಯ 7ನೇ ವಾಷರ್ಿಕೋತ್ಸವ ಮತ್ತು ಸ್ವಾಮಿ ವಿವೇಕಾನಂದ ಅವರ 157ನೇಯ ಜಯಂತಿ ನಿಮಿತ್ಯ "ಯುವ ದಿನ" ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಮಾರಂಭಕ್ಕೆ ಅತಿಥಿಗಳಾಗಿ ಪಾಲ್ಗೊಂಡ ಬಿಇಒ ಮಾತನಾಡಿದರು.
ಸಕರ್ಾರದ ಯಾವುದೇ ಆಥರ್ಿಕ ಸಹಾಯ ಪಡೆದುಕೊಳ್ಳದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಕೆಲ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಇದು ಒಂದ ರೀತಿ ಒಳ್ಳೆಯ ಬೆಳವಣಿಗೆ ಎಂದು ಎ.ಎಸ್.ಜೋಡಗೇರಿ ಹೇಳಿದರು.
ಸಮಾರಂಭದ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಕೃಷಕ ಸಮಾಜದ ಅಧ್ಯಕ್ಷ ಗುರುಗೌಡಾ ಪಾಟೀಲ ಇವರು ಮಾತನಾಡಿ, ವಿದ್ಯಾಥರ್ಿಗಳಿಗೆ ಸ್ವಾಮಿ ವಿವೇಕಾನಂದ ಮತ್ತು ರಾಷ್ಟ್ರ ನಿಮರ್ಾಣಕ್ಕಾಗಿ ತಮ್ಮ ಪ್ರಾಣ ಕೊಟ್ಟ ನೇತಾರರ ಸಾಹಸ, ಧೈರ್ಯ, ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಮಾಹಿತಿ ನೀಡಿರಿ ಎಂದರು.
ಸಮಾರಂಭದಲ್ಲಿ ನಿವೃತ್ತ ಸೈನಿಕ ಬಸಣ್ಣಾ ದೇಸಾಯಿ, ಮಾಜಿ ಜಿಪಂ ಸದಸ್ಯನಿ ಶೈಲಜಾ ಕಾಚರ್ಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಂ.ಕೆಂಪೆ, ಮುಖ್ಯಾಧ್ಯಾಪಕ ಈಶ್ವರ ಪಟಗಾರ, ಉಗಾರ ಲಾಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಕಾಂತ ಭಟ್ಟ್, ಪಿಡಿಒ ಗೋಪಾಲ ಮಾಳಿ, ಸೇರಿದಂತೆ ಅನೇಕ ಪಾಲಕರು ಉಪಸ್ಥಿತರಿದ್ದರು. ಶಾಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದ ವಿದ್ಯಾಥರ್ಿಗಳಿಗೆ ಮತ್ತುವಿವೇಕಾನಂದ ಹಾಗೂ ರಾಷ್ಟ್ರ ಪುರುಷರ ವೇಶಭೂಷಣ ಮಾಡಿದ್ದ ಮಕ್ಕಳನ್ನು ಸನ್ಮಾನಿಸಿದರು.