ಲೋಕದರ್ಶನ ವರದಿ
ಕಂಪ್ಲಿ 11:ವಿದ್ಯಾಥರ್ಿಗಳು ಕಲಿಕಾ ಹಂತದಲ್ಲಿ ಪುಸ್ತಕ ಜ್ಞಾನದ ಅವಶ್ಯಕ ಬೆಳೆಸಿಕೊಳ್ಳಬೇಕು. ಸ್ಪಧರ್ಾತ್ಮಕ ಯುಗದಲ್ಲಿ ಗುಣಾತ್ಮಕ ಶಿಕ್ಷಣದ ಮೂಲಕ ಗುರಿ ತಲುಪಲು ಸಾಧ್ಯ ಎಂದು ಬಳ್ಳಾರಿ ಡಯಟ್ ಉಪನ್ಯಾಸಕ ಡಿ.ರವಿರಾಮ್ ಹೇಳಿದರು.
ಪಟ್ಟಣದ ಸಕರ್ಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರೌಢ ಶಾಲಾ ವಿಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸರಸ್ವತಿ ಪೂಜೆ, 10ನೇ ತರಗತಿ ವಿದ್ಯಾಥರ್ಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾಷರ್ಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಸ್ತು, ಸಂಯಮದಿಂದ ನಿರಂತರವಾಗಿ ವಿದ್ಯಾಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು ಎಂದು ತಿಳಿಸಿದರು.
ಸಕರ್ಾರಿ ಬಾಲಕಿಯರ ಪ್ರೌಢ ಶಾಲೆಯ ಉಪ ಪ್ರಾಚಾರ್ಯ ಅನ್ಸಾರ್ ಸಾಹೇಬ್ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾಥರ್ಿಗಳು ಗುರಿಯ ಜೊತೆ ಛಲ ಹೊಂದಿದರೆ, ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿನಿಯರಿಗೆ ನಗದು ಬಹುಮಾನ ವಿತರಣೆ ಹಾಗೂ ವಿವಿಧ ಕ್ರೀಡೆಯಲ್ಲಿ ಜಯಗಳಿದ ವಿದ್ಯಾಥರ್ಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಜ್ಞಾನ ವಸ್ತು ಪ್ರದರ್ಶನ: ಪ್ರೌಢ ಶಾಲಾ ವಿದ್ಯಾಥರ್ಿನಿಯರು ನಾನಾ ವಸ್ತುಗಳಿಂದ ತಯಾರಿಸದ ವಿಜ್ಞಾನ ಪ್ರಯೋಗಗಳ ಕುರಿತು ಗಣ್ಯರಿಗೆ ವಿವರಿಸಿದರು. ರಂಗೋಲಿ ಸ್ಪಧರ್ೆ ಕೂಡ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಪಿ.ನಾಗರಾಜ, ನಿವೃತ್ತ ಶಿಕ್ಷಕಿ ಅಂಬಮ್ಮ, ಶಿಕ್ಷಕರಾದ ಶರಣಪ್ಪ, ಹುಲಿಗೆಮ್ಮ, ಸೋಮೇಶಪ್ಪ, ಸಿದ್ದಲಿಂಗೇಶ್ವರ ಗದುಗಿನ, ಗಂಗಾಧರಯ್ಯ ಜಡಿಮಠ್, ಕೆ.ನಾಗೇಂದ್ರ, ಶ್ರೀನಿವಾಸ, ಜಬೀನಾ, ಎಸ್.ವೀಣಾ, ವಿಲ್ಸನ್.ಜೆ.ಆಡಿನ್, ಎಫ್ಡಿಸಿ ಕೆ.ನಾಗರಾಜ ಸೇರಿದಂತೆ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ನಂತರ ವಿದ್ಯಾಥರ್ಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.