ರಂಜಾನ್ ರಜೆ ಪ್ರಕಟಿಸಿದ ಕತಾರ್

ಕತಾರ್, ಮೇ ೧೯, ಕತಾರ್ ಸರ್ಕಾರ ರಂಜಾನ್  ರಜೆಯನ್ನು ಪ್ರಕಟಿಸಿದೆ. ಮೇ ೧೯ ರಿಂದ ೨೮ರವರೆಗೆ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಈದ್ ಅಲ್  ಫಿತರ್ ರಜೆ ಇರಲಿದೆ ಎಂದು ಕತಾರ್  ತಿಳಿಸಿದೆ. ಮತ್ತೆ ಮೇ ೩೧ ರಂದು ಎಂದಿನಂತೆ  ಕೆಲಸಗಳಿಗೆ ಹಾಜರಾಗಬೇಕು ಎಂದು  ಸೂಚಿಸಿದೆ.  ಮತ್ತೊಂದಡೆ.. ಕತಾರ್ ನಲ್ಲಿ ಕೊರೊನಾ ಸಾಂಕ್ರಾಮಿಕ  ತೀವ್ರಗೊಂಡಿದೆ.  ಈವರೆಗೆ ೩೩,೯೬೯ ಮಂದಿಗೆ ಸೋಂಕಿನಿಂದ   ಬಾಧಿತರಾಗಿದ್ದು, ೪೮೯೯ ಮಂದಿ ಚೇತರಿಸಿಕೊಂಡಿದ್ದಾರೆ  ೧೫ ಮಂದಿ ಮೃತಪಟ್ಟಿದ್ದಾರೆ.