ನವದೆಹಲಿ, ಡಿ 18 ಟಿ-10 ಲೀಗ್‌ನಲ್ಲಿ ಹಲವು ಪ್ರಸಿದ್ಧ ಭ್ರಷ್ಟರನ್ನು ತಡೆಹಿಡಿದ ನಂತರ ಹೊಸ ತನಿಖೆಗಳನ್ನು ಹಮ್ಮಿಕೊಳ್ಳಲಾಗಿದೆ
ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಸ್ಪಷ್ಟಪಡಿಸಿದೆ.ಐಸಿಸಿ ಭ್ರಷ್ಟಾಚಾರ
ನಿಗ್ರಹ ಘಟಕವನ್ನು (ಎಸಿಯು) ಸಂಘಟಕರು ನಿಯೋಜಿತ ಭ್ರಷ್ಟಾಚಾರ ನಿಗ್ರಹ ಅಧಿಕಾರಿಯಾಗಿ ನೇಮಿಸಲಾಗಿದೆ.12
ತಿಂಗಳ ಹಿಂದೆ ಐಸಿಸಿ ಅನುಮೋದಿತ ಈ ಟೂರ್ನಿಯು ಡಿಸೆಂಬರ್ 7 ರಂದು ಪ್ರಾರಂಭವಾಗುವ ಕೆಲವೇ ದಿನಗಳಲ್ಲಿ
ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು.
ಐಸಿಸಿಯ ಎಸಿಯು ಅನ್ನು ಲೀಗ್‌ನ ಸಂಘಟಕರು ತೊಡಗಿಸಿಕೊಂಡಿದ್ದಾರೆ, ಇಬ್ಬರು ಅಧಿಕಾರಿಗಳನ್ನು ದೇಶದಲ್ಲಿ
ನಿಯೋಜಿಸಲಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್ಇನ್‌ಫೊ ವರದಿ ಮಾಡಿದೆ."ಸಂಘಟಕರು ಒದಗಿಸಿದ ಉತ್ತಮ
ಮಾಹಿತಿಯ ಆಧಾರದ ಮೇಲೆ ಐಸಿಸಿ ಈ ಟೂರ್ನಿ ಆಯೋಜನೆಗೆ 12 ತಿಂಗಳ ಹಿಂದೆ ಅನುಮತಿ ನೀಡಿತ್ತು. ಆದರೆ,
ಟೂರ್ನಿ ಆರಂಭವಾಗುವ ಕೆಲವೇ ದಿನಗಳ ಮುನ್ನ ತಂಡದ ಮಾಲೀಕತ್ವ ಮತ್ತು ಸಂಘಟಕರಲ್ಲಿ ಸಾಕಷ್ಟು ಬದಲಾವಣೆಗಳು
ನಮ್ಮ ಗಮನಕ್ಕೆ ಬಂದವು. ಹಾಗಾಗಿ, ನಾವು ಹೆಚ್ಚುವರಿ ತನಿಖೆ ಕೈಗೊಂಡಿದ್ದೇವೆ. ತನಿಖೆ ಮುಗಿದ ಬಳಿಕ
ನಮ್ಮ ಅನುಮಾನಗಳು ಪರಿಹಾರವಾಗಲಿವೆ," ಎಂದು ಐಸಿಸಿ ಸಮಗ್ರತೆ ಘಟಕದ ಜನರಲ್ ಮ್ಯಾನೇಜರ್ ಅಲೆಕ್ಸ್
ಮಾರ್ಷಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ."ಇದರ ಪರಿಣಾಮವಾಗಿ ನಾವು ಕತಾರ್ ಮತ್ತು ಜಾಗತಿಕವಾಗಿ
ಹಲವು ಪ್ರಸಿದ್ಧ ಭ್ರಷ್ಟರನ್ನು ತಡೆದಿದ್ದೇವೆ ಮತ್ತು ಈ ಸಂದರ್ಭದಲ್ಲಿ ಯೋಜಿತ ಭ್ರಷ್ಟ ಚಟುವಟಿಕೆಯನ್ನು
ಅಡ್ಡಿಪಡಿಸಿದ್ದೇವೆ. ತನಿಖೆ ಮುಂದುವರಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ,
ಕ್ರಿಕೆಟ್ ಅನ್ನು ಭ್ರಷ್ಟಚಾರ ಮುಕ್ತ ಕ್ರೀಡೆಯಾಗಿ ರೂಪಿಸುವುದು ನಮ್ಮ ಉದ್ದೇಶ"ಎಂದು ಅವರು
ಹೇಳಿದರು.