ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಖಾದ್ರಿಗೆ ಸನ್ಮಾನ
ಶಿಗ್ಗಾವಿ 07 : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್ ಅಜ್ಜಂಪಿರ್ ಖಾದ್ರಿ ಅವರು ಕ್ಯಾಬಿನೆಟ್ ದರ್ಜೆ ಸ್ಥಾನಮಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರಿಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಶಿಗ್ಗಾವಿ ತಾಲೂಕ ಘಟಕದಿಂದ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ನಿಕಟಪೂರ್ವ ರಾಜ್ಯ ಕೇಂದ್ರ ಕಾರ್ಯಕಾರಿ ಸದಸ್ಯ ಮಂಜುನಾಥ್ ಮಣ್ಣಣ್ಣವರ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ನಮ್ಮ ತಾಲೂಕಿನ ಜನಪರ ರೈತಪರ ಕಾಳಜಿವುಳ್ಳ ನಾಯಕರು ಅಧ್ಯಕ್ಷರಾಗಿರುವುದು ನಮ್ಮ ತಾಲೂಕು ಜಿಲ್ಲೆಗೆ ಹೆಮ್ಮೆಯ ಸಂಗತಿ ಆಗಿದೆ ಎಂದು ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕ ಸಂಘದ ಅಧ್ಯಕ್ಷ ಎನ. ಎಸ್. ಹಿರೇಮಠ, ಉಪಾಧ್ಯಕ್ಷ ಅಬ್ದುಲ್ ಹರಪನಹಳ್ಳಿ, ಚಂದ್ರಶೇಖರ ಕೊಪರ್ಡೇ, ಕೆ ಟಿ ಪಾಟೀಲ, ಶಿವರಾಜ, ಶರಣಪ್ಪ ದೇಸಾಯಿ, ಸುರೇಶ್ ಬಿಸನಹಳ್ಳಿ, ಬೂದನೂರ, ನವೀನ ಇಂಗಳಗಿ, ಈರಣ್ಣ ಎಲಿಗಾರ, ಅಬ್ದುಲ್ ಆದಂಬಾಯಿ, ಮುಲ್ಲಾ ಇನ್ನು ಹಲವಾರು ಗುತ್ತಿಗೆದಾರರು ಉಪಸ್ಥಿತರಿದ್ದರು.