ತಾಂಡಾಗಳಲ್ಲಿಯ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಒತ್ತು ನೀಡಿ

ಗದಗ 24: ತಾಂಡಾಗಳಲ್ಲಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲವಾಗಿಸಲು ಮುಂದಾಗಬೇಕಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು. 

ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಬೆಳದಡಿ ಗ್ರಾಮದಲ್ಲಿ (ದಿ.23) ರಂದು ಜರುಗಿದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.  ಯಾವುದೇ ಕಾರಣಕ್ಕೂ ಲಿಂಗ ಅಸಮಾನತೆ ತೋರ್ಪಡಿಸದೆ ಗಂಡು ಹೆಣ್ಣು ಸಮಾನರು ಎಂಬ ನಿಲುವನ್ನು ಪ್ರತಿಯೊಬ್ಬರು ಹೊಂದುವಂತಾಗಬೇಕು ಎಂದು  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಆನಂದ ಕೆ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕಿ ಎಚ್.ಎಚ್.ಕುಕನೂರ, ಬೆಳದಡಿ ಗ್ರಾ.ಪಂ. ಅಧ್ಯಕ್ಷ ಲೋಕೆಶ ಕಟ್ಟಿಮನಿ, ಉಪಾಧ್ಯಕ್ಷೆ ರೂಪವ್ವ ಜಾದವ, ಸದಸ್ಯರುಗಳಾದ ಲಾಲವ್ವ.ಜಾದವ, ಸೊಮಪ್ಪ ಮಾಳಗಿಮನಿ, ಅಂಗನವಾಡಿ ಕಾರ್ಯಕತರ್ೆ ಫರೀದಾ ಅಂಚಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮಂಜುನಾಥ ಬಮ್ಮನಕಟ್ಟಿ, ಗಣ್ಯರುಗಳಾದ ಶಿವಪ್ಪ ತೋಟದ, ಹಾಲಪ್ಪ ಪೂಜಾರ, ತಾವರೆಪ್ಪ ಪೂಜಾರ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಕೊಣ್ಣೂರಿನ ಜೈ-ಕಿಸಾನ ಸಾಂಸ್ಕೃತಿಕ ಕಲಾತಂಡದವರು ಜಾಗೃತಿ ಗೀತೆ ಪ್ರಚುರಪಡಿಸಿದರು. ನಂತರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಂಬಾಣಿ ನೃತ್ಯವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.