ಕಾಂಗ್ರೆಸ್ ಕೈ ಬಿಟ್ಟು ಕಮಲಕ್ಕೆ ಕೈ ಹಿಡಿದ ಪುಷ್ಪ ಕಲ್ಮೇಶ ಗೊಸಾಯಿವರು
ಮುಂಡಗೋಡ 11: ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಗೊಸಾಯಿವರು ಕಾಂಗ್ರೆಸ್ ಕೈ ಬಿಟ್ಟು ಕಮಲದ ಪಕ್ಷಕ್ಕೆ ಸೇರೆ್ಡಯಾಗಿದ್ದಾರೆ. ತಾಲೂಕಿನ ಚಿಗಳ್ಳಿ ಗ್ರಾಮದ ಪುಷ್ಪ ಕಲ್ಮೇಶ ಗೋಸಾಮಿಯವರು ಮಂಗಳವಾರ ಬಿಜೆಪಿ ನಾಯಕ್ ಎಲ್.ಟಿ.ಪಾಟೀಲರ ಅವರ ಮನೆಯಲ್ಲಿ ಸೇರೆ್ಡ ಯಾದ ಪುಷ್ಪಾ ಗೋಸಾಯಿವರಿಗೆ ಪಕ್ಷದ ಧ್ವಜವನ್ನು ಕೊಡುವ ಮೂಲಕ ಬಿಜೆಪಿ ಪಕ್ಷವನ್ನು ಎಲ್.ಟಿ.ಪಾಟೀಲ ರ ಸಮ್ಮುಖದಲ್ಲಿ ಸೇರೆ್ಡಯಾದರು.
ಎಲ್.ಟಿ.ಪಾಟೀಲ ಮಾತನಾಡಿ ಚಿಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ ಗೋಸಾಯಿವರು ಬಿಜೆಪಿಗೆ ಸೇರೆ್ಡಗೊಂಡಿದ್ದಾರೆ. ಕಳೆದ ನಾಲ್ಕುವರ್ಷದಿಂದ ಪಂಚಾಯತ್ ಎಲ್ಲ ಸದಸ್ಯರು ಪಕ್ಷ ಭೇದ ಮರೆತು ಒಗ್ಗೂಡಿಕೊಂಡು ಕಾರ್ಯಮಾಡುತ್ತಾ ಬಂದಿದ್ದರು. ಕಾಂಗ್ರೆಸ್‌ನ ಕೆಲವು ಮುಖಂಡರು ನಿಮಗೆ ಕೊಟ್ಟಂತ ಅಧಿಕಾರವಧಿ ಮುಗಿದಿದೆ ನೀವು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು.ಪುಷ್ಪಾ ಗೋಸಾಯಿವರು ನಮ್ಮನ್ನು ಸಂಪರ್ಕಿಸಿ ಕೇಳಿದಾಗ ಇನ್ನೂ ಒಂದು ವರ್ಷ ಅಧಿಕಾರವಧಿ ಇದೆ ಎಂದು ತಿಳಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಡ ತರುತ್ತಿದ್ದರು. ಇದರಿಂದ ಬೇಸತ್ತು ಅಧ್ಯಕ್ಷೆ ಸೋಮವಾರ ಬಂದು ನಮಗೆ ಭೇಟಿಯಾಗಿ ತಮಗೆ ಅಲ್ಲಿ ನೀಡುತ್ತಿರುವ ತೊಂದರೆಯನ್ನು ತಡೆಯಲು ಅಸಾಧ್ಯವಾಗಿದೆ ಆದ್ದರಿಂದ ಬಿಜೆಪಿ ಪಕ್ಷವನ್ನು ಸೇರುತ್ತೇನೆ ಎಂದು ಕೇಳಿಕೊಂಡಾಗ ನಾವು ಮಂಗಳವಾರ ಅವರನ್ನು ನಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ ಎಂದು ಎಲ್ ಟಿ ಪಾಟೀಲ ಹೇಳಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರು ಮಂಜುನಾಥ್ ಪಾಟೀಲ್ ಮಂಜುನಾಥ ಹೋತ್ನಳ್ಳಿ ಅಶೋಕ ಬದನಗೋಡ ಹಾಗೂ ಪ್ರಭುಲಿಂಗ ಕೆಂಗಣ್ಣವರ ಸೇರಿದಂತೆ ಫಕ್ಕಿರಸ್ವಾಮಿ ಹುಲಿಯಾರ ರತ್ನವ್ವಾ ತಡಸದ, ಹುಲಿಗೇಲ್ವಾ ಶಿರಗೇರಿ,ಬಿಜೆಪಿ ಕಾರ್ಯಕರ್ತರು ಇದ್ದರು.