ಹೈದರಾಬಾದ್ 15: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ “ಪುಷ್ಪ 2: ದಿ ರೂಲ್” ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಬರೋಬ್ಬರಿ 1,292 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ ಎಂದು ಚಿತ್ರ ನಿರ್ಮಾಪಕರು ರವಿವಾರ(ಡಿ15) ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2: ದಿ ರೂಲ್ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವುದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದೆ. ಕಳೆದ 10 ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ರೂ, 1,292 ಕೋಟಿ ಕಲೆಕ್ಷನ್ ಮಾಡುವುದರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಕಲೆಕ್ಷನ್ ದಾಖಲೆಯನ್ನು ಮುರಿದಿದೆ.
ಚಿತ್ರದ ನಿರ್ಮಾಪಕರು ಭಾನುವಾರ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸುಕುಮಾರ್ ನಿರ್ದೇಶನದ ತೆಲುಗು ಚಿತ್ರ ಡಿಸೆಂಬರ್ 5 ರಂದು ಹಿಂದಿ, ತಮಿಳು, ಕನ್ನಡ , ಬೆಂಗಾಳಿ ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.
ನಿರ್ಮಾಣ ಬ್ಯಾನರ್ Mythri Movie Makers ತನ್ನ ಅಧಿಕೃತ X ಖಾತೆಯಲ್ಲಿ ಇತ್ತೀಚಿನ ಬಾಕ್ಸ್ ಆಫೀಸ್ ಅಪ್‌ಡೇಟ್ ಚಿತ್ರದ ಪೋಸ್ಟರ್‌ನೊಂದಿಗೆ ಹಂಚಿಕೊಂಡಿದೆ, “2024 ರಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಕಂಡಿದೆ. ವಿಶ್ವದಾದ್ಯಂತ 10 ದಿನಗಳಲ್ಲಿ 1292 ಕೋಟಿ ರೂ. ಕಲೆಕ್ಷನ್ ಮಾಡಿದೆ. 2024 ರಲ್ಲಿ ಭಾರತೀಯ ಸಿನಿಮಾದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎನಿಸಿಕೊಂಡಿದೆ.
ವಿಶೇಷವೆಂದರೆ “ಪುಷ್ಪ 2” ನ ಹಿಂದಿ ಡಬ್ಬಿಂಗ್ ಗಳಿಕೆ 507.50 ಕೋಟಿ ರೂಪಾಯಿಯಾಗಿದ್ದು, 500 ಕೋಟಿ ರೂ.ಗಳ ಗಡಿಯನ್ನು ದಾಟಿದ ಹಿಂದಿಯ ಅತಿವೇಗದ ಚಿತ್ರ ಎಂಬ ದಾಖಲೆಗೆ ಭಾಜನವಾಗಿದೆ.