ಹಳ್ಳ ಹಿಡಿದ ಸ್ವಚ್ಛ ಭಾರತ ಅಭಿಯಾನ

ಲೋಕದರ್ಶನ ವರದಿ

ಮಹಾಲಿಂಗಪೂರ 2: 2016 ರಿಂದ 2018-19 ನೆಯ ಸಾಲಿನ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ 800 ಜನ ಫಲಾನುಭವಿಗಳು ವೈಯಕ್ತಿಕ ಶೌಚಾಲಯಗಳನ್ನು ನಿಮರ್ಿಸಿಕ್ಕೊಂಡಿದ್ದಾರೆ.ಇವರಿಗೆ ಕ್ರಮವಾಗಿ ಕಂತಿನ ಹಣವನ್ನು ಪುರಸಭೆ ಮಹಾಲಿಂಗಪೂರ ಸಿಬ್ಬಂದಿ ನೀಡದೆ ಸತಾಯಿಸುತ್ತಿದ್ದಾರೆ ಎಂದು "ಉದ್ಧೇಶಿತ" ಸರ್. ಎಮ್.ವಿಶ್ವೆಶ್ವರಯ್ಯ ಜಿಲ್ಲಾ ಕಟ್ಟಡ  ಕಾಮರ್ಿಕರ ಸಂಘದ ಅಧ್ಯಕ್ಷ ಅಜರ್ುನ್. ರಾ.ಬಂಡಿವಡ್ಡರ್ ಆರೋಪಿಸಿದ್ದಾರೆ. 

  ಈಗಾಗಲೇ ಪೌರಾಢಳಿತ ನಿಧರ್ೆಶನಾಲಯದಿಂದ ಆದೇಶವಿದ್ದರೂ ಪುರಸಭೆಯವರು ಕೆಲವರಿಗೆ ಮೊದಲ ಕಂತು ನೀಡಿ ಕೊನೆಯ ಎರಡು ಕಂತು ನೀಡಿಲ್ಲ, ಕೆಲವರಿಗೆ ಕೊನೆಯ ಕಂತು ಮಾತ್ರ ನೀಡಿದ್ದಾರೆ.ಹೀಗೆ ಇನ್ನು ಹಲವಾರು ತರಹದ ಸಮಸ್ಯೆಗೆ ಸಿಲುಕುವಂತೆ ಮಾಡಿ ಕೆಲವರು ಸಾಲ-ಸೋಲ ಮಾಡಿ ಶೌಚಾಲಯ ನಿಮರ್ಿಸಿಕ್ಕೊಂಡು ಬಿಲ್ಲಗಾಗಿ ಕಾಯ್ದು-ಕಾಯ್ದು ಬೆಸತ್ತು ಹೋಗಿದ್ದಾರೆ.ಇದನ್ನೆಲ್ಲ ಗಮನಿಸಿದ ಅಧ್ಯಕ್ಷ ಅಜರ್ುನ್ ಬಂಡಿವಡ್ಡರ್ ಸಂತ್ರಸ್ತರ ನೆರವಿಗೆ ಬಂದು ರಭಕವಿ-ಬನಹಟ್ಟಿ ತಾಲೂಕಿನ ದಂಡಾಧಿಕಾರಿಗಳಿಗೆ ಫಲಾನುಭವಿಗಳಿಗೆ ಆಗಿರುವ ಹಾಗೂ ಆಗುತ್ತಿರುವ ಸಮಸ್ಯೆಗಳನ್ನು ದೂರ ಮಾಡಿ ಆಗಿರುವ ಅನ್ಯಾಯವನ್ನು ಸರಿಪಡಿಸಿ  ಸಂತ್ರಸ್ತರಿಗೆ ನ್ಯಾಯ ಒದಗಿಸಲು ಅವರ ಪರವಾಗಿ  ಮನವಿಯನ್ನು ಅಪರ್ಿಸಿದರು.  ಇದಕ್ಕೆ ತಪ್ಪಿದಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು. 

   ಈ ಸಂಧರ್ಭದಲ್ಲಿ ಸಂಗಮೇಶ ಮರೇಗುದ್ದಿ, ಶ್ರಿಶೈಲ್ ದೊಡಮನಿ,ಚನ್ನಪ್ಪ ಮುಕ್ಕೆನ್ನವರ್, ಕ್ರಿಷ್ಣಾ ಪಾತ್ರೊಟ್, ಗುರಪ್ಪ ಪಾತ್ರೋಟ್, ಗುರು ನಾಗರಾಳ, ಹೊನ್ನಪ್ಪ ಬಿರಡಿ, ಮನ್ನಮಿ ಉಪಸ್ತಿತರಿದ್ದರು.