ಬಳ್ಳಾರಿ,ಮೇ 15: ಜಿಲ್ಲೆಯಲ್ಲಿ 2019-20 ನೇ ಸಾಲಿನ ಹಿಂಗಾರು(ರಬಿ) ಹಂಗಾಮಿನ ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ಸಕರ್ಾರವು ನಿಗದಿಪಡಿಸಿದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತದೆ ಎಂದು ಜಿಲ್ಲಾ ಟಾಸ್ಕ್ಫೋಸರ್್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
2019-20ನೇ ಸಾಲಿನ ಹಿಂಗಾರು ಋತುವಿನ ಬೆಂಬಲ ಬೆಲೆ ಯೋಜನೆಯ ಪ್ರಕ್ರಿಯೆಯನ್ನು ಮುಂದುವರೆಸಲಾಗುವುದು. ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ 1815 ರೂ ರಂತೆ ಹಾಗೂ ಗ್ರೇಡ್ "ಎ" ಭತ್ತ ಪ್ರತಿ ಕ್ವಿಂಟಾಲ್ಗೆ 1835 ರೂ ರಂತೆ ಬೆಂಬಲ ಬೆಲೆಯನ್ನು ಘೋಷಿಸಿ ಖರೀದಿಸಲಾಗುತ್ತದೆ. ಹಿಂಗಾರು ಋತುವಿನ ಖರೀದಿಯನ್ನು ಪ್ರತ್ಯೆಕವಾಗಿ ಮಾಡಲಾಗುವುದು. ಮುಂಗಾರು ಋತುವಿನಲ್ಲಿ ಬೆಳೆದ ಬೆಳೆ ಬಗ್ಗೆ ಈಗಾಗಲೇ ನೋಂದಾಯಿಸಿದ್ದರೆ ಪುನಃ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೋಂದಣಿ ಮಾಡಿಕೊಳ್ಳಲು ಬಯಸುವ ರೈತರು ಮೇ 31 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಎಂದು ಅವರು ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯ ಮೂಲಕ ಜಿಲ್ಲೆಯ ಬಳ್ಳಾರಿ/ಕುರುಗೋಡು, ಸಿರುಗುಪ್ಪ, ಸಂಡೂರು, ಕೂಡ್ಲಿಗಿ/ಕೊಟ್ಟೂರು, ಹೊಸಪೇಟೆ, ಕಂಪ್ಲಿ, ಹೆಚ್.ಬಿ.ಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕುಗಳ ಆಯಾ ಎ.ಪಿ.ಎಂ.ಸಿ. ಯಾಡರ್್ಗಳಲ್ಲಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕನಿಷ್ಠ ಬೆಂಬಲೆ ಯೋಜನೆಯಡಿ ಸಂಗ್ರಾಹಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಪಾಸ್ ಹಾಗೂ ಮಾಸ್ಕ್ಗಳನ್ನು ಕೆ.ಎಫ್.ಸಿ.ಎಸ್.ಸಿ.ಯ ಜಿಲ್ಲಾ ವ್ಯವಸ್ಥಾಪಕರ ಬಳಿ ಪಡೆದುಕೊಳ್ಳಬೇಕು ಹಾಗೂ ಮಾರಾಟ ನೋಂದಣಿಗಾಗಿ ಮತ್ತು ಮಾರಾಟಕ್ಕಾಗಿ ಧಾನ್ಯವನ್ನು ತರುವ ರೈತರಿಗೆ, ಹಮಾಲಿಗಳಿಗೆ ಹಾಗೂ ಸಾಗಾಣಿಕ ವಾಹನಗಳಿಗೆ ಕೋವಿಡ್-19 ಕರೋನಾ ವೈರಸ್ ಪ್ರಸರಣ ತಡೆಗಟ್ಟಲು ವಿಧಿಸಿರುವ ನಿರ್ಬಂಧದ ಹಿನ್ನಲೆಯಲ್ಲಿ ಅಗತ್ಯ ಪಾಸ್ಗಳನ್ನು ಜಂಟಿ ನಿದರ್ೆಶಕರು ಹಾಗೂ ಕೃಷಿ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಲಾಕ್ಡೌನ್ ನಿಯಮಗಳನುಸಾರ ಸಾಮಾಜಿಕ ಅಂತರ, ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸಂಗ್ರಾಹಣಾ ಕೇಂದ್ರದಲ್ಲಿ ಜನ ಜಂಗುಳಿ ಉಂಟಾಗದಂತೆ ನಿದರ್ಿಷ್ಟ ಸಂಖ್ಯೆ ರೈತರಿಗೆ ಮಾತ್ರ ಅವಕಾಶ ನೀಡಬೇಕು. ಸಂಗ್ರಾಹಣಾ ಕೇಂದ್ರದಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಕೇಂದ್ರ/ ರಾಜ್ಯ ಸಕರ್ಾರವು ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಖರೀದಿ ಕೇಂದ್ರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕರೋನಾ ಪಾಸಿಟಿವ್ ಕಂಡುಬಂದಿದ್ದಲ್ಲಿ ಅಂತಹ ಕೇಂದ್ರಗಳನ್ನು ತೆರೆಯಬಾರದು. ಖರೀದಿ ಕೇಂದ್ರ ತೆರೆದ ನಂತರ ಅಂತಹ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತಿಳಿಸಬೇಕು.
ಬೆಂಬಲ ಬೆಲೆ ಯೋಜನೆ ಕಾಯರ್ಾಚರಣೆಯನ್ನು ಖರೀದಿ ಏಜೆನ್ಸಿಯಾದ ಕೆ.ಎಫ್.ಸಿ.ಎಸ್.ಸಿ ಬಳ್ಳಾರಿ ಸಕರ್ಾರದ ಮಾರ್ಗಸೂಚಿಯಂತೆ ನಿರ್ವಹಿಸಬೇಕು.
ರೈತರು ಆರ್.ಟಿ.ಸಿ ಮತ್ತು ಫಸಲು ದಾಖಲಾತಿಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಆರ್.ಎಸ್.ಕೆ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.