ಗದಗ 16: ದುಷ್ಟರ ಸಂಹಾರ ಶಿಷ್ಟರ ರಕ್ಷಣೆ ಎಂಬ ಸಂದೇಶ ರವಾನೆ ಮಾಡುವದು ನ್ಯಾಯಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ನ್ಯಾಯಾಂಗ ಅಕ್ಯಾಡೆಮಿಯ ಗೌವರ್ನರ ಕೆ.ಎನ್.ಫಣೀಂದ್ರ ನುಡಿದರು.
ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕನರ್ಾಟಕ ನ್ಯಾಯಾಂಗ ಅಕಾಡೆಮಿಯು ಗದಗ, ಕೊಪ್ಪಳ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು, ಪೊಲೀಸ ಹಾಗೂ ಅಭಿಯೋಜಕ ಇಲಾಖೆಗಳ ಸಹಯೋಗದಲ್ಲಿ ವಿದ್ಯುನ್ಮಾನ ಸಾಕ್ಷಿ ಕುರಿತ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿಈ ಉಪಕರಣಗಳ ಬಳಕೆ ಹೆಚ್ಚಾಗುತ್ತಿದ್ದು ಇವುಗಳ ದುರುಪಯೋಗವೂ ಹೆಚ್ಚಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ವಿದ್ಯುನ್ಮಾನ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ಇಂದಿನ ದಿನಮಾನಗಳಲ್ಲಿ ಸಾಕ್ಷ್ಯಗಳ ಡಿಜಿಟಲೀಕರಣ ಮಾಡುವದು ಅತೀ ಅವಶ್ಯಕವಾಗಿದ್ದು ನ್ಯಾಯಾಲಯಗಳಿಗೆ ವಿದ್ಯುನ್ಮಾನ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕಿದ್ದು ಈ ಉಪಕರಣಗಳ ಬಳಕೆ ಬಗ್ಗೆ ಪ್ರತಿಯೊಬ್ಬರು ಜ್ಞಾನ ಹೊಂದುವದು ಅತೀ ಅವಶ್ಯಕವಾಗಿದೆ. ಯಾವುದೇ ಪ್ರಕರಣದಲ್ಲಿ ತನಿಖಾಧಿಕಾರಿ, ನ್ಯಾಯವಾದಿ ಹಾಗೂ ನ್ಯಾಯಾಧೀಶರ ಪರಸ್ಪರ ಸಮನ್ವಯತೆ ಅತೀಅವಶ್ಯಕವಾಗಿದ್ದು ಇದರಿಂದ ಅಪರಾಧಿಗೆ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ. ಇಂದು ನಡೆಯುತ್ತಿರುವ ವಿದ್ಯುನ್ಮಾನ ಸಾಕ್ಷ್ಯ ಕಾಯರ್ಾಗಾರದಲ್ಲಿ ಚಚರ್ಿಸಲಾಗುವ ವಿಷಯಗಳನ್ನು ಅರಿತು ಚಿಂತನ ಮಂಥನ ಮಾಡಿ ತಮ್ಮ ಕರ್ತವ್ಯಗಳನ್ನು ಶ್ರದ್ದೆಯಿಂದ ನಿಭಾಯಿಸಿ ಇತರರಿಗೂ ಈ ಕುರಿತು ಮಾಹಿತಿ ನೀಡುವಂತೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ಉಚ್ಛ ನ್ಯಾಯಾಲಯದ ಹಾಗೂ ಗದಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಅವರು ಮಾತನಾಡಿ ಯಾವುದೇ ಪ್ರಕರಣದಲ್ಲಿ ವಿದ್ಯುನ್ಮಾನ ಸಾಕ್ಷ್ಯದ ಬಗ್ಗೆ ನ್ಯಾಯಾಧೀಶರ ಜೊತೆಗೆ ಪೋಲಿಸ, ಅಭಿಯೋಜನೆ ಹಾಗೂ ನ್ಯಾಯಾಲಯಗಳ ಸಿಬ್ಬಂದಿಗಳ ಪಾತ್ರವು ಮಹತ್ವದಾಗಿದೆ. ಸಾಕ್ಷ್ಯ ಸಂಗ್ರಹದಲ್ಲಿ ಪೋಲಿಸ ಇಲಾಖೆ ಮುತುವಜರ್ಿ ವಹಿಸುವದು ಅತೀ ಅವಶ್ಯಕವಾಗಿದೆ. ವಿದ್ಯುನ್ಮಾನ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅದರ ನೈಜತೆಯನ್ನು ಗುರುತಿಸುವ ಮಹತ್ತರ ಕಾರ್ಯವಾಗಬೇಕಿದೆ. ಸಂವಿಧಾನದ ಹಕ್ಕಿಗೆ ಚ್ಯುತಿ ಬಂದಂತಹ ಸಂದರ್ಭದಲ್ಲಿ ಎಲ್ಲರೂ ಕೈ ಜೋಡಿಸಿ ದುಷ್ಟರಿಗೆ ಶಿಕ್ಷೆ ನೀಡಿ ಸಂವಿಧಾನದ ಆಶೋತ್ತರ ನೆರವೇರಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಕಾರ್ಯಗಾರದಲ್ಲಿ ಕನರ್ಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಸಂದೇಶ ಜೆ. ಚೌಟಾ ವಿದ್ಯುನ್ಮಾನ ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಿಕೆ, ಗುರುತಿಸುವಿಕೆ ಇವುಗಳ ಕುರಿತು, ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಮನಿಷಕುಮಾರ ಅವರು ಅಂತರ್ಜಾಲ ಅಪರಾಧ ಹಾಗೂ ಡಿಜಿಟಲ್ ಫೋರೆನ್ಸಿಕ್ ಕುರಿತು ಮತ್ತು ಸಿ.ಐ.ಡಿಯ ಕಾನೂನು ಸಲಹೆಗಾರ ಮಹೇಶ ವೈದ್ಯ ಅವರು ವಿದ್ಯುನ್ಮಾನ ಸಾಕ್ಷ್ಯ ಸಂಗ್ರಹಣೆ ಹಾಗೂ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಆರ್.ರಾಜಸೋಮಶೇಖರ, ಗದಗ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಎನ್.ಯತೀಶ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿದರ್ೇಶಕಿ ಪ್ರಭಾವತಿ.ಎಮ್. ಹಿರೇಮಠ, ಗದಗ ಹಾಗೂ ಕೊಪ್ಪಳ ನ್ಯಾಯಾಧೀಶರು, ಸರಕಾರಿ ಅಭಿಯೋಜಕರು, ನ್ಯಾಯಾಂಗ ಹಾಗೂ ಪೋಲಿಸ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಗದಗ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಸ್ವಾಗತಿಸಿದರು. ಸಿವಿಲ್ ನ್ಯಾಯಾಧೀಶೆ ಸಲ್ಮಾ.ಎ.ಎಸ್. ಹಾಗೂ ನಿಖಿತಾ ಎಸ್.ಅಕ್ಕಿ ಕಾರ್ಯಕ್ರಮ ನಿರೂಪಿಸಿದರು.