ಲೋಕದರ್ಶನ ವರದಿ
ನಾಡಿನ ಮನೆ-ಮನಗಳಲ್ಲಿ ಪುನೀತ್ ಜೀವಂತ : ಪ್ರತಾಪ ಗೌಡಪ್ಪಗೋಳ
ಮಹಾಲಿಂಗಪುರ 18: ಸಿನಿಮಾ, ನಿಸ್ವಾರ್ಥ ಸಮಾಜ ಸೇವೆ, ಕೊಡುಗೈ ದಾನಿಯಾಗಿ, ಕಲಾರಾಧನೆಯ ಮೂಲಕ ಸಾವಿನ ನಂತರವು ನಾಡಿನ ಮನೆ-ಮನಗಳಲ್ಲಿ ಜೀವಂತವಾಗಿರುವ ದಿ.ಪುನೀತ್ ರಾಜಕುಮಾರ ಅವರು ನಾಡಿನ ಯುವಶಕ್ತಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದು ಪವರ್ ಸ್ಟಾರ್ ಪುನೀತ್‌ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರತಾಪ ಗೌಡಪ್ಪಗೋಳ ಹೇಳಿದರು.
ಪಟ್ಟಣದ ಬುದ್ನಿಪಿಡಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಪುನೀತ್ ರಾಜಕುಮಾರ ಅವರ 50ನೇ ಜನ್ಮ ದಿನದ ಪ್ರಯುಕ್ತ ಅಪ್ಪು ಯುವ ಸಾಮ್ರಾಜ್ಯ ವೇದಿಕೆ, ಅಪ್ಪು ಅಭಿಮಾನಿಗಳ ಸಂಘ ಮತ್ತು ವೀರಭದ್ರೇಶ್ವರ ರಕ್ತಕೇಂದ್ರ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರಳತೆ, ನಿಸ್ವಾರ್ಥ ದಾನ ಗುಣದಿಂದ ಸದಾ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿರುವ ಪುನೀತ್ ಅವರ ಜೀವನದ ಆದರ್ಶ ಮೌಲ್ಯಗಳನ್ನು ಇಂದಿನ ಯುವಶಕ್ತಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಮಾತನಾಡಿ ಮಾತನಾಡಿ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ, ಕಲಾವಿದರಾಗಿ ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿರುವ ಅಪ್ಪು ಅವರು, ಮರಣಾನಂತರ ನಾಡಿನ ಪ್ರತಿಯೊಂದು ಮನ-ಮನೆಯ ದೇವರಾಗಿದ್ದಾರೆ. ಸೂರ್ಯಚಂದ್ರ ಇರುವರೆಗೂ ಪುನೀತ್ ರಾಜಕುಮಾರ್ ಹೆಸರು, ನೆನಪು ಶಾಶ್ವತವಾಗಿರುತ್ತದೆ. ಅವರ ಜನ್ಮದಿನ ಪ್ರಯಕ್ತ ರಕ್ತದಾನ ಶಿಬಿರ ಆಯೋಜಿಸಿದ ಪ್ರತಾಪ ಗೌಡಪ್ಪಗೋಳ ಗೆಳೆಯರ ಬಳಗದ ಸಾಮಾಜಿಕ ಸೇವಾ ಕಾರ್ಯವು ಶ್ಲಾಘನೀಯ ಎಂದರು.
ಪವರ್‌ಸ್ಟಾರ್ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಲಾಯಿತು. 40ಕ್ಕೂ ಅಧಿಕ ಯುವಕರು ಪುನೀತ್ ನೆನಪಿಗಾಗಿ ರಕ್ತದಾನ ಮಾಡಿದರು.
ಪತ್ರಕರ್ತ ಚಂದ್ರಶೇಖರ ಮೋರೆ, ಮಲ್ಲು ಪಶ್ಚಾಪೂರ, ಶಶಿಧರ ನಕಾತಿ, ಮಹಾದೇವ ಕಡಬಲ್ಲವರ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಶೈಲ ಪೂಜೇರಿ, ಆನಂದ ಗೌಡಪ್ಪಗೋಳ, ಮಹಾಂತೇಶ ಗೌಡಪ್ಪಗೋಳ, ನವೀನ ಗೌಡಪ್ಪಗೋಳ, ಸಾಧಿಕ್ ರೋಣ, ಅಪ್ಪಾಸಾಬ ನಾಲಬಂದ, ಪ್ರಭು ನಿಲಾರಿ, ಶಿವರಾಜ ಗೌಡಪ್ಪಗೋಳ, ಪ್ರವೀಣ ಗೌಡಪ್ಪಗೋಳ, ವಿಶ್ವನಾಥ ಮೇತ್ರಿ, ಶಿವಪುತ್ರ ಮೇಟಿ, ರಸೂಲ್ ಮುಲ್ಲಾ, ನೀತಿನ ಗೌಡಪ್ಪಗೋಳ, ಬಸವರಾಜ ಯಡ್ರಾಂವಿ, ರಮೇಶ ಕುರಿ, ಹಣಮಂತ ನಾಯಕ, ವಿಷ್ಣು ಪವಾರ, ರಾಹುಲ್ ಸಂಗಾನಟ್ಟಿ, ಬಸವರಾಜ ಹೊಸೂರ, ಸುನೀಲ ಸಂಗಾನಟ್ಟಿ, ರಾಘವೇಂದ್ರ ಉತ್ತೂರ, ರಾಹುಲ್ ಹುಣಸಿಕಟ್ಟಿ, ಕೃಷ್ಣಾ ಡೊಂಬರ, ಆನಂದ ಘಟ್ನಟ್ಟಿ, ಉಮೇಶ ಹೂಗಾರ ಸೇರಿದಂತೆ ಹಲವರು ಇದ್ದರು.