ಲೋಕದರ್ಶನವರದಿ
ಹಾವೇರಿ, 20: ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಕಳೆದ ವರ್ಷ ದುಷ್ಟರ ಕುತಂತ್ರದಿಂದಾಗಿ ಕಾಶ್ಮೀರ ಬಳಿಯ ಪುಲ್ವಾಮಾ ನೆಲದಲ್ಲಿ ದೇಶಸೇವೆಯಲ್ಲಿ ನಿರತರಾಗಿದ್ದ ವೀರಸೈನಿಕರು ಪಾಪಕೃತ್ಯಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡು ಹುತಾತ್ಮರಾದ ವೀರಸೈನಿಕರಿಗೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಮಪರ್ಿಸಿದರು. ಹುತಾತ್ಮ ಯೋಧರು ದೇಶಸೇವೆಗಾಗಿ ತಮ್ಮ ಪ್ರಾಣ ನೀಡಿ ದೇಶವೇ ದೇವರೆಂದು ನಂಬಿ ಕಾರ್ಯ ಮಾಡಿ-ಮಡಿದ ಕರಾಳ ದಿನಂದಂದು ಮುಂದೆಂದೂ ಇಂತಹ ದುರ್ಘಟನೆ ಜರುಗದಿರಲೆಂದು ಪ್ರಾಥರ್ಿಸಿದರು. ಇದೇ ಸಂದರ್ಭದಲ್ಲಿ ವಿಭಾಗದ ಸಂಯೋಜಕ ಪ್ರೊ. ಜಿ. ಎಸ್. ಬಾಕರ್ಿ, ಪ್ರೊ. ರಮೇಶ ಅಜರಡ್ಡಿ, ಡಾ|| ಗುರುಪಾದಯ್ಯ ಸಾಲಿಮಠ, ಪ್ರೊ. ಸುಮಾ ಹಿರೇಮಠ, ಪ್ರೊ. ಸುಮಂಗಲಾ ಜಿ. ಎಮ್., ಪ್ರೊ. ಪವನ ಉಪಸ್ಥಿತರಿದ್ದರು.