ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಲೋಕದರ್ಶನ ವರದಿ

ಕಾಗವಾಡ:  ಕಾಗವಾಡ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿ ತೀರದ ಕೃಷ್ಣಾ-ಕಿತ್ತೂರ, ಕಾತ್ರಾಳ ಗ್ರಾಮಗಳಲ್ಲಿಯ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ಮಂಜೂರು ಪಡೆದುಕೊಂಡಿದ್ದೇನೆ. ಈ ಗ್ರಾಮಗಳು ಈ ವರೆಗೆ ಅಭಿವೃದ್ಧಿ ಕಂಡಿಲ್ಲಾ ಎಂದು ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಶನಿವಾರ ರಂದು ಕಾಗವಾಡ ಮತಕ್ಷೇತ್ರದ ಕಾತ್ರಾಳ, ಕೃಷ್ಣಾ-ಕಿತ್ತೂರ ಗ್ರಾಮಗಳಲ್ಲಿಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದಲಿ ಪೂಜೆ ಸಲ್ಲಿಸಿ, ಚಾಲನೆ ನೀಡಿದ ಬಳಿಕ ಶ್ರೀಮಂತ ಪಾಟೀಲ ಮಾತನಾಡಿದರು.

ಕೃಷ್ಣಾ-ಕಿತ್ತೂರ ಗ್ರಾಮದಲ್ಲಿ ಮಂಜೂರುಗೊಂಡ ಕಾಮಗಾರಿಗಳ ಬಗ್ಗೆ ಅವರ ಆಪ್ತ ಸಹಾಯಕ ಪ್ರಶಾಂತ ಅಪರಾಜ ಮಾಹಿತಿ ನೀಡಿದರು.

ಇದರಲ್ಲಿ ಅನೇಕ ದಿನಗಳಿಂದ ಬೇಡಿಯಾಗಿ ಉಳಿದಿರುವ ಕೃಷ್ಣಾ-ಕಿತ್ತೂರ-ಐನಾಪೂರ, ಗುಬ್ಬಿಮಡ್ಡಿ ರಸ್ತೆ ನಿಮರ್ಿಸಲು 1.35 ಕೋಟಿ ರೂ. ಗ್ರಾಮದ ಕಾತ್ವಾ ಬಸಪ್ಪಾ ಸಾಂಗಾವೆ ಇವರ ಮನೆಯಿಂದ ತ್ಯಾಮವ್ವಾ ವಸತಿ ಕರಲ ಹಾದಿ ರಸ್ತೆ ಅಭಿವೃದ್ಧಿಗೆ 62 ಲಕ್ಷ ರೂ. ಗ್ರಾಮದ ಚಂದೂರೆ ಸೀಮೆ(ಶಿರಗೂರ ರಸ್ತೆ) ಡಾಂಬರಿಕರಣಗಾಗಿ 1.57 ಕೋಟಿ. ಅದೇ ರೀತಿ ಲಕ್ಷ್ಮೀದೇವಿ ದೇವಸ್ಥಾನ ಅಭಿವೃದ್ಧಿಗೆ 5 ಲಕ್ಷ, ಗಣಪತಿ ಮಂದಿರ ಅಭಿವೃದ್ಧಿ 2.50 ಲಕ್ಷ, ಗ್ರಾಮದ ವಗಣಿಮಾರ ರಸ್ತೆ ಸುಧಾರಣೆಗಾಗಿ 2 ಲಕ್ಷ, ಗ್ರಾಮದ ಸಾರ್ವಜನಿಕ ಸ್ವಶಾನ ಅಭಿವೃದ್ಧಿಗಾಗಿ 1.50 ಲಕ್ಷ, ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ ಭವನ ನಿಮರ್ಿಸಲು 12 ಲಕ್ಷ, ಗ್ರಾಮದ ಖೆಮಲಾಪುರ ರಸ್ತೆ ಸುಧಾರಣೆಗಾಗಿ 23 ಲಕ್ಷ, ಗ್ರಾಮದ ವಿಠ್ಠಲ ರುಕ್ಮಿನಿ ಸಂತ ಮಂಡಳ ಹತ್ತಿರ ಸಮುದಾಯ ಭವನ ನಿಮರ್ಿಸಲು 5 ಲಕ್ಷ, ಯಲ್ಲಮ್ಮ ದೇವಸ್ಥಾನದ ಹತ್ತಿರ ಭವನ ನಿಮರ್ಿಸಲು 5 ಲಕ್ಷ, ಮರಗುಬಾಯಿ ದೇವಸ್ಥಾನ ಹತ್ತಿರ ಸಮುದಾಯ ನಿಮರ್ಿಸಲು 5 ಲಕ್ಷ, ಕಾಡಸಿದ್ಧೇಶ್ವರ ದೇವಸ್ಥಾನದ ಹತ್ತಿರ ಭವನ ನಿಮರ್ಿಸಲು 5 ಲಕ್ಷ, ಫಿರಾಸಾಬ ಮಸಿದಿ ಹತ್ತಿರ ತಡೆಗೋಡೆ ನಿಮರ್ಿಸಲು 5 ಲಕ್ಷ, ಜಾಕವೇಲ ರಸ್ತೆ ಅಭಿವೃದ್ಧಿಗಾಗಿ 12 ಲಕ್ಷ ಹೀಗೆ 4.37 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೃಷ್ಣಾ-ಕಿತ್ತೂರ ಗ್ರಾಮಕ್ಕೆ ನೀಡಲಾಗಿದೆ.

ಕಾತ್ರಾಳ ಗ್ರಾಮದ ಅಭವೃದ್ಧಿಗಾಗಿ ರಾಜ್ಯ ಹೆದ್ದಾರಿ ಅನುದಾನದಿಂದ ಕಾತ್ರಾಳ-ಐನಾಪೂರ ರಸ್ತೆ ಅಭಿವೃದ್ಧಿಗಾಗಿ 3.60 ಲಕ್ಷ, ಕಾತ್ರಾಳ ಗ್ರಾಮದಿಂದ ಕೂಡು ರಸ್ತೆ ಅಭಿವೃದ್ಧಿಗಾಗಿ 76.66 ಲಕ್ಷ, ದಲಿತರ ಓಣಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ 8 ಲಕ್ಷ, ಯಲ್ಲಮ್ಮ ದೇವಸ್ಥಾನದ ಜಿಣರ್ೊದ್ಧಾರಕ್ಕಾಗಿ 5.7 ಲಕ್ಷ, ರೇಣುಕಾ ದೇವಸ್ಥಾನ ಇಂದಿರಾನಗರ, ಹನುಮಾನ ದೇವಸ್ಥಾನ ಮಂದಿರಗಳ ಜಿಣರ್ೊದ್ಧಾರಕ್ಕಾಗಿ ತಲಾ 5 ಲಕ್ಷ, ಹೀಗೆ 4 ಕೋಟಿ ರೂ. ವೆಚ್ಚಗಳಲ್ಲಿ ನಿಮರ್ಿಸುವ ಕಾಮಗಾರಿಗಳಿಗೆ ಅನರ್ಹ ಶಾಸಕ ಶ್ರೀಮಂತ ಪಾಟೀಲ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಂ.ಎಸ್.ವಡೆಯರ, ಜಿಪಂ ಸದಸ್ಯ ಆರ್.ಎಂ.ಪಾಟೀಲ, ರಾಜೇಂದ್ರ ಪೋತದಾರ, ದಾದಾ ಪಾಟೀಲ, ಮುರಗ್ಯಪ್ಪಾ ಮಗದುಮ್ಮ, ಉದಯ ಮಾನೆ, ನಾನಾಸಾಹೇಬ ಅವತಾಡೆ, ಸುರೇಶ ಗಾಣಿಗೇರ, ಶಿವಗೌಡಾ ಪಾರಶೆಟ್ಟಿ, ದಾದಾಸಾಹೇಬ ನಾಯಿಕ, ದತ್ತಾತ್ರಯ ಕದಂ, ಶ್ರೀಶೈಲ್ ಭಾನುಶೆ, ಸಂಭಾಜಿ ಪವಾರ, ಶ್ರೀಶೈಲ್ ತ್ರೀಕಾಣಿ, ಈಶ್ವರ ಇಚ್ಚಲಕರಂಜಿ, ಅಪ್ಪಾಸಾಬ ಬಿಂದಗಿ, ಶಿವಪ್ಪಾ ಜಂಬಗಿ, ಈರಪ್ಪಾ ಪಾಟೀಲ, ಪ್ರದೀಪ ಲಿಂಬಿಕಾಯಿ, ದಶ್ರತ ತೇರದಾಳೆ, ರತನ ಪಾಟೀಲ, ಸುಶಾಂತ ಕುಚನೂರೆ, ರಾಮಾ ಯಂಡೋಳೆ, ರವಿ ಭೋಸಲೆ, ಸೇರಿದಂತೆ ಅನೇಕರು ಇದ್ದರು.