ಕಾಗವಾಡದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಕಾಗವಾಡ 16: ಸಮಾಜದಲ್ಲಿ ಜಾತಿ, ಮತ, ಪಂಥ, ಬಡವ-ಶ್ರೀಮಂತರ ಮಧ್ಯದ ಕಂದಕವನ್ನು ದೂರು ಮಾಡಿ, ಸಮಾನತೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಸಾರ್ವಜನಿಕರು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಂಡು, ನೆಮ್ಮದಿಯ ಜೀವನ ನಡೆಸಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು ಶನಿವಾರ ದಿ. 15 ರಂದು ಕಾಗವಾಡ ಪಟ್ಟಣ ಪಂಚಾಯತಿಯ 153 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳು, ಅಂಬೇಡ್ಕರ್ ಮತ್ತು ವಾಜಪೇಯಿ ವಸತಿ ಯೋಜನೆಯ 92 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಪಟ್ಟಣ ಪಂಚಾಯತಿಗೆ ನೂತನ ಜೆಸಿಬಿ, ಫಾಗಿಂಗ್ ಮತ್ತು ಜೆಟ್‌ಕಿಂಗ ವಾಹನಗಳ ಹಾಗೂ ಪಂಚಾಯತಿಯ ನೂತನ ಗೊಡಾವನ್ ಉದ್ಘಾಟನೆ ಮತ್ತು ಬಸವನಗರದಲ್ಲಿ ್ಲ ಸ್ವಾಗತ ದ್ವಾರದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಪಟ್ಟಣದ ಅಂಬಾಬಾಯಿ, ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಮೊದಲಿಗೆ ದೀಪ ಬೆಳಗಿಸಿ, ಚಾಲನೆ ನೀಡಲಾಯಿತು. ಹಿರಿಯರಾದ ಬಿ.ಜೆ. ಪಾಟೀಲ ಮಾತನಾಡಿದರು. ಉಪತಹಶೀಲ್ದಾರ ರಷ್ಮಿ ಜಕಾತಿ, ಪಿಎಸ್‌ಐ ಜಿ.ಜಿ. ಬಿರಾದರ, ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ಸೌರಭ ಪಾಟೀಲ, ರಮೇಶ ಚೌಗುಲಾ, ಚಿದಾನಂದ ಅವಟಿ, ಅಣ್ಣಾಸಾಬ ಕಠಾರೆ, ರಾಜು ಕರವ, ಪ್ರಕಾಶ ಪಾಟೀಲ ಸೇರಿದಂತೆ ಪಟ್ಟಣದ ಅನೇಕ ಮುಖಂಡರು, ಸಾರ್ವಜನಿಕರು, ಫಲಾನುಭವಿಗಳು ಉಪಸ್ಥಿತರಿದ್ದರು. ಮುಖಂಡ ಜ್ಯೋತಿಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಸ್ವಾಗತಿಸಿದರು.