ಸಾರ್ವಜನಿಕರು ಸುಸಜ್ಜಿತ ಕಾಮಗಾರಿಗೆ ಕೈ ಜೋಡಿಸಿ; ಶಾಸಕ ಅಶೋಕ ಮನಗೂಳಿ

ಸಾರ್ವಜನಿಕರು ಸುಸಜ್ಜಿತ ಕಾಮಗಾರಿಗೆ ಕೈ ಜೋಡಿಸಿ; ಶಾಸಕ ಅಶೋಕ ಮನಗೂಳಿ Public should join hands for well-executed works: MLA Ashok Managuli

ಲೋಕದರ್ಶನ ವರದಿ 

        ಸಿಂದಗಿ 07 : ನಮ್ಮ ಸರ್ಕಾರ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಜೊತೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡುವ ಮೂಲಕ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಸಾರ್ವಜನಿಕರು ಸುಸಜ್ಜಿತ ಕಟ್ಟಡ ಕಾಮಗಾರಿಗಳಿಗೆ ಕೈಜೋಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು. ಸಮೀಪದ ಮೋರಟಗಿ ಗ್ರಾಮದ ದಲಿತ ಕಾಲೋನಿಯಲ್ಲಿ 2025-26 ನೇ ಸಾಲಿನ ಮುಖ್ಯಮಂತ್ರಿ ಮುಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ 50 ಲಕ್ಷ ರು ವೆಚ್ಚದ ಡಾ, ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ.

         ಹಾಗೂ 25 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿ, 31 ಸಾವಿರ ಮತಗಳ ಅಂತರದಲ್ಲಿ ಸೊಲು ಕಂಡಿದ್ದ ನನಗೆ ಮರಳಿ ಶಾಸಕನಾಗಿ ಆಯ್ಕೆ ಮಾಡಿ ಮರುಜನ್ಮ ನೀಡಿದ್ದಾರೆ ಈ ಮೂರು ವರ್ಷದ ಅವಧಿಯಲ್ಲಿ ಮೋರಟಗಿ ಗ್ರಾಮದಲ್ಲಿ ಸಿಸಿ ರಸ್ತೆ ಕೆರೆ ಅಭಿವೃದ್ಧಿ, ಭವನಗಳು ಸೇರಿದಂತೆ 5 ಕೊಟಿಗಿಂತಲೂ ಅಧಿಕ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ ಇಲ್ಲಿನ ಬಹುದಿನಗಳ ಬೇಡಿಕೆಯಾಗಿದ್ದ  ಡಾ.ಅಂಬೇಡ್ಕರ ಭವನ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿಲಾಗುತ್ತಿದೆ ತಾವೆಲ್ಲರೂ ಗುತ್ತಿಗೆದಾರರಿಗೆ ಸಹಕಾರ ನೀಡಿ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

        ದಲಿತ ಮುಖಂಡ  ಶ್ರೀಶೈಲ್ ಜಾಲವಾದಿ ಗೊಲಗೇರಿ ಮಾತನಾಡಿ, ಶಾಸಕರು ಮೇಲ್ವರ್ಗದದವರು ಆಗಿದ್ದರೂ ಕೂಡಾ ದೊಡ್ಡ ಸಮುದಾಯಗಳ ಜೊತೆಗೆ ದಲಿತ ಮುಸ್ಲಿಂ ಸೇರಿದಂತೆ ಇತರ ಸಣ್ಣ ಪುಟ್ಟ ಸಮುದಾಯದ ಏಳಿಗೆಗಾಗಿ ಶ್ರಮಿಸಿಸುತ್ತಿದ್ದಾರೆ ಶಾಸಕರ ತಂದೆಯವರಾದ ಮಾಜಿ ಸಚಿವ ದಿ ಎಂ. ಸಿ. ಮನಗೂಳಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಾಗುತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಎನ್ ಆರ್ ತಿವಾರಿ, ಎಂ ಕೆ ಕಣ್ಣಿ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ್, ಮಾಜಿ ತಾಪಂ ಸದಸ್ಯ ಪ್ರಕಾಶ್ ಅಡಗಲ್,  ನಿಂಗನಗೌಡ ಪಾಟೀಲ, ಮಾಜಿ ಸೈನಿಕ ಎಂ ಟಿ ಸಿಂಗೆ, ರವಿಕಾಂತ ನಡುವಿನಕೇರಿ, ರಜಾಕ್ ಬಾಗವಾನ, ಭೂತಾಳಿ ವಸ್ತಾರಿ, ಅರುಣ್ ಸಿಂಗೆ ನಿಂಗಣ್ಣ ವಾಲಿಕಾರ ಸೇರಿದಂತೆ ಅನೇಕರು ಇದ್ದರು.