ಸಿಟಿ ಬಸ್ ಆರಂಭಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಮನವಿ

Public appeal to start city buses

ತಾಳಿಕೋಟಿ 28: ಪಟ್ಟಣವು ತಾಲೂಕ ಕೇಂದ್ರವಾಗಿ ಪರಿವರ್ತನೆಗೊಂಡ ನಂತರ ಕ್ಷಿಪ್ರವಾಗಿ ಬೆಳೆಯುವುದರ ಜೊತೆಗೆ ಸಾಕಷ್ಟು ವಿಸ್ತಾರಗೊಂಡಿದೆ ಪಟ್ಟಣದ ನಾಗರಿಕರು ತಮ್ಮ ಅಗತ್ಯ ಕಾರ್ಯಗಳಿಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ತುಂಬಾ ತೊಂದರೆ ಆಗುತ್ತಿದ್ದು ಸಾರ್ವಜನಿಕರಿಗೆ ಸಂಚಾರದ ಅನುಕೂಲಕ್ಕಾಗಿ ಪಟ್ಟಣದಲ್ಲಿ ಸಿಟಿ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಇಲ್ಲಿಯ ನಾಗರಿಕರು ಘಟಕ ವ್ಯವಸ್ಥಾಪಕ ಭೋವಿ ಇವರಿಗೆ ರವಿವಾರ ಮನವಿ ಸಲ್ಲಿಸಿದರು.  

ಮನವಿ ಪತ್ರದಲ್ಲಿ ಪಟ್ಟಣವು ಸಾಕಷ್ಟು ವಿಸ್ತಾರಗೊಂಡಿರುವುದರಿಂದ ದೇವರ ಹಿಪ್ಪರಗಿ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ಸುಮಾರು 3 ಕಿ.ಮೀ, ಸೋಮನಾಳ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ಎರಡು ಕಿಲೋಮೀಟರಗಿಂತ ಹೆಚ್ಚು ಅಂತರ ವಿದ್ದು ಪಟ್ಟಣದಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಇಲ್ಲಿನ ನಾಗರಿಕರಿಗೆ ತುಂಬಾ ತೊಂದರೆ ಆಗುತ್ತಿದೆ ಇದರ ಜೊತೆಗೆ ಶಾಲಾ ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳು ಶ್ರೀ ಬಸವೇಶ್ವರ ವೃತ್ತದ ಮಾರ್ಗವಾಗಿ ಹೋಗಬೇಕು ಇಲ್ಲಿ ಅತಿ ಹೆಚ್ಚಾದ ವಾಹನ ಸಂಚಾರ ಇರುವುದರಿಂದ ನಡೆದುಕೊಂಡು ಹೋಗುವುದು ಕಷ್ಟ ಸಾಧ್ಯ ಏನಾದರೂ ಹೆಚ್ಚು ಕಮ್ಮಿ ಆದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇವೆ ಆದ್ದರಿಂದ ಸುರಕ್ಷತೆ ಹಾಗೂ ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಗೆ ಸಿಟಿ ಬಸ್ ಸಂಚಾರವನ್ನು ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.  

ಈ ವೇಳೆ ಪಟ್ಟಣದ ನಾಗರೀಕರಾದ ಬಸವರಾಜ ಜಾಗಟಗಲ್, ಶರಣಬಸವ ಆವಂತಿ,ಮಲ್ಲನಗೌಡ ಬಿರಾದಾರ,ರಾಜು ದೊಡ್ಡಮನಿ, ಉದಯಕುಮಾರ ಬಳಗಾನೂರ, ಮಹಬೂಬಶಾ ಮಕಾನದಾರ, ಸುಧಾ ಜಿ. ಸಕ್ರಿ,  ಬಿ.ಜಿ.ಕೊಣ್ಣೂರ, ರಾಜೇಶ್ವರಿ ಕುಳಗೇರಿ,ಶಂಕರಗೌಡ ಬಿರಾದಾರ,ಬಸಪ್ಪ ಆದವಾನಿ, ಶ್ರೀದೇವಿ ಶಿ.ಅರಬಿ, ವಿಜಯಲಕ್ಷ್ಮಿ.ರ. ಅರವಿ, ಗೀರೀಶ ಪಾಟೀಲ, ಈರಮ್ಮ ಪಾಟೀಲ,ರೇಖಾ ಪಾಟೀಲ, ಭಾಗ್ಯಶ್ರೀ ಪಾಟೀಲ, ಕಾವ್ಯ ಮದ್ರಾಸಿ, ಎನ್‌.ಎಂ. ಅಮಲ್ಯಾಳ, ಕಾಶಿನಾಥ ಶಿವಣಗಿ, ಬಸ್ಸು ಇಜೇರಿ, ವೀರೇಶ ಹಿರೇಮಠ ಮತ್ತಿತರರು ಇದ್ದರು.