ಹಾವೇರಿ: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮ ಯೋಜನೆಯಡಿ ಹಿರೇಕೆರೂರು ತಾಲೂಕಿನ ಆಯ್ದ 20 ಗ್ರಾಮಗಳಲ್ಲಿ ಸಕರ್ಾರದ ವಿವಿಧ ಯೋಜನೆಗಳ ಜಾಗೃತಿ ಮೂಡಿಸಲು ಆಯೋಜಿಸಲಾದ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕಮ ಮಂಗಳವಾರ ಕಚವಿ ಹಾಗೂ ಯಮ್ಮಿಗನೂರ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿತು.
ಹಿರೇಕೆರೂರು ತಾಲೂಕು ಕಚವಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಹಾಗೂ ಯಮ್ಮಿಗನೂರ ಗ್ರಾ.ಪಂ.ಸದಸ್ಯ ಗುಡ್ಡಪ್ಪ ಗ್ರಾಮಗಳಲ್ಲಿಸಂಗೀತ ಪರಿಕರ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೋಡಿಬಸವೇಶ್ವರ ಕಲಾ ತಂಡ ಹಾಗೂ ಜೈಹನುಮಾನ ಸಂಗೀತ ಕಲಾವಿದರು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಗ್ರಾಮಸ್ಥರಿಗೆ ಪ್ರಧಾನಮಂತ್ರಿ ಕೃಷಿ ಸಮ್ಮಾನ್, ಮೀನುಗಾರರ ಸಾಲಮನ್ನಾ ಇತರೆ ಯೋಜನೆಗಳ ಮಾಹಿತಿ ನೀಡಿದರು. ಬೀದಿನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ವಾತರ್ಾ ಇಲಾಖೆಯ ರಾಮಚಂದ್ರ ಉಕ್ಕಲಿ ಹಾಗೂ ಅಪ್ರೆಂಟಿಸ್ ತರಬೇತಿ ಅಭ್ಯಥರ್ಿ ಮಂಜುಳಾ ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.