ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ: ಬಿಜೆಪಿ ಯುವ ಮುಖಂಡ ಉಮೇಶಗೌಡ

ಲೋಕದರ್ಶನ ವರದಿ

ಗದಗ 04:  ಧಾರ್ಮಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ ಎಂದು ಬಿಜೆಪಿ ಯುವ ಮುಖಂಡ ಉಮೇಶಗೌಡ ಸಿ. ಪಾಟೀಲ ಹೇಳಿದರು.

ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಸಮೀಪದ ಕರ್ಕಿಕಟ್ಟಿ ಗ್ರಾಮದ ಪವಾಡ ಪುರು ಕಲಬುರ್ಗಿ  ಶರಣಬಸವೇಶ್ವರರ 16ನೇ ವರ್ಷದ ಪುರಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಿರಂತರ ಒತ್ತಡದಿಂದ ಪರಿಹಾರ ಪಡೆಯಲು ಧಾಮರ್ಿಕತೆ ಒಲವನ್ನು ಹೊಂದಿದಾಗ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು. ಯುವಕರ ಮುಂದಾಳತ್ವದಲ್ಲಿ ಗ್ರಾಮದಲ್ಲಿನ ಧಾಮರ್ಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಕರ್ಕಿಕಟ್ಟಿ ಗ್ರಾಮದ ಅಭಿವೃದ್ಧಿಗೆ ಯುವಕರ ಪಾತ್ರ ಬಹುದೊಡ್ಡದಾಗಿದೆ.

ಜಿ.ಪಂ. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ ಮಾತನಾಡಿ, ಶರಣಬಸವೇಶ್ವರರ ಪುರಾಣ ಕಾರ್ಯಕ್ರಮದ ಅಂಗವಾಗಿ ಕಾರ್ತಿಕೋತ್ಸವದಲ್ಲಿ ಪುರಾಣ ಪ್ರವಚನಗಳನ್ನು ಏರ್ಪಡಿಸಿ ಗ್ರಾಮದ ಜನರಿಗೆ ಸದ್ವಿಚಾರಗಳನ್ನು ಹಂಚುವ ಕೆಲಸವನ್ನು ಗ್ರಾಮದ ಯುವಕರು ಮಾಡಿರುವುದು ಹೆಮ್ಮೆಯ ವಿಷಯ ಎಂದರು. ಅಲ್ಲದೇ ಕಾತರ್ಿಕೋತ್ಸವದ ದೀಪ ಬೆಳಗಿದ ರೀತಿಯಲ್ಲಿ ಎಲ್ಲರ ಜೀವನದಲ್ಲಿ ಕಷ್ಟವೆಂಬ ಕತ್ತಲೆ ಕಳೆದು ಬೆಳಕನ್ನು ಪ್ರಜ್ವಲಿಸುವ ದೀಪದಂತೆ ಎಲ್ಲರ ಬದುಕು ಹಸನಾಗಲಿ ಎಂದು ಹೇಳಿದರು.

ತ್ರಿಭಾಷಾ ಕವಿ, ಕನಕ ಪುರಂದರ, ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ಪಂ. ಪುಟ್ಟರಾಜ ಶಿವಯೋಗಿಗಳ ಶಿಷ್ಯ ಹುನಗುಂಡಿ ಗ್ರಾಮದ ಷಡಕ್ಷರಯ್ಯ ಶಾಸ್ತ್ರಿಗಳು ಒಂದು ತಿಂಗಳ ಕಾಲ ಕಕರ್ಿಕಟ್ಟಿ ಗ್ರಾಮದ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪುರಾಣ ಪ್ರವಚನ ನೀಡಿದ್ದಾರೆ. ಅವರಿಗೆ ಮೈಲಾರಪ್ಪ ಹೂಗಾರ ಹಾಮರ್ೋನಿಯಂ, ಗುರುಪಾದಪ್ಪ ಭಜಂತ್ರಿ ತಬಲಾ ಸಾಥ್ ನೀಡಿದ್ದಾರೆ.

    ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ರೋಣ ತಾ.ಪಂ. ಅಧ್ಯಕ್ಷ್ಯೆ ಪ್ರೇಮಾ ನಾಯಕ, ಮೆಣಸಗಿ ಗ್ರಾ.ಪಂ. ಅಧ್ಯಕ್ಷ್ಯೆ ಧರಿಯವ್ವ ಬೀರಪ್ಪ ವಾಗ್ಮೋಡೆ, ರೋಣ ತಾ.ಪಂ. ಸದಸ್ಯೆ ನಾಗವ್ವ ಹನುಮಂತಪ್ಪ ಕಲಾದಗಿ, ಮೆಣಸಗಿ ಗ್ರಾ.ಪಂ. ಉಪಾಧ್ಯಕ್ಷೆ ಬಸವ್ವ ಈ. ಗೌಡ್ರ, ಮೆಣಸಗಿ ಗ್ರಾ.ಪಂ. ಸದಸ್ಯ ಈರನಗೌಡ ಶಂಕರಗೌಡ ಗೌಡ್ರ, ಗಣ್ಯ ವ್ಯಾಪಾರಸ್ಥರಾದ ಲಿಂಗಬಸಯ್ಯ ರು. ಮಠದ, ಗ್ರಾಮದ ಮುಖಂಡರಾದ ಈರಣ್ಣ ಶಿ. ದೇಸಾಯಿ, ಹನುಮಂತಗೌಡ್ರ ಬಿ. ಗೌಡ್ರ, ಶಿವಲಿಂಗಯ್ಯ ರು. ಮಠದ, ನರಗುಂದ ತಾ.ಪಂ. ಮಾಜಿ ಆಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಶಶಿಕಾಂತ ಫತ್ತೇಪೂರ, ಪ್ರವೀಣ ವಾಲಿ, ತಿಪ್ಪಣ್ಣ ದಾಸರ, ವಗೇಪ್ಪ ರಾಠೋಡ, ರವಿ ಬಾಗಲಕೋಟ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

     ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕರಕೀಕಟ್ಟಿ ಗ್ರಾಮದ ಚನ್ನಮಲ್ಲಯ್ಯ ಹಿರೇಮಠ, ಬಸಯ್ಯ ಹಿರೇಮಠ, ಶಿರೋಳ ಗ್ರಾಮದ ಅಪ್ಪಯ್ಯಸ್ವಾಮಿ ಹಿರೇಮಠ ನೇತೃತ್ವ ವಹಿಸಿದ್ದರು. ಅಜ್ಜು ಶ. ಗಾಣಿಗೇರ ಕಾರ್ಯಕ್ರಮ ನಿರೂಪಿಸಿ, ಕೊನೆಗೆ ವಂದಿಸಿದರು.