ಶಿಗ್ಗಾವಿ 28: ಬೆಳಗಾವಿ ಹೊರತುಪಡಿಸಿ ಇತರಡೆ ಆರೋಗ್ಯ ಸೇವೆ ನೀಡಬೇಕು ಎಂಬ ಬಹಳ ವರ್ಷಗಳ ಕನಸುಬರುವ ಜೂನ ತಿಂಗಳಲ್ಲಿ ಹುಬ್ಬಳ್ಳಿಯ ಗಬ್ಬೂರ ಹತ್ತಿರ 24 ಎಕರೆ ಪ್ರದೇಶದಲ್ಲಿ 650 ಕೋಟಿಗಿಂತ ಹೆಚ್ಚು ಹಣವನ್ನು ವ್ಯಯಮಾಡಿ ದೊಡ್ಡ ಪ್ರಮಾಣದ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾರಂಬಿಸುತ್ತಿದ್ದೇವೆ ಎಂದುಕೆ.ಎಲ್.ಇ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಸಂಯುಕ್ತಾಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು 109 ವರ್ಷಗಳಿಂದ ಬಡವರಿಗೆ ಉತ್ತಮ ಶಿಕ್ಷಣದ ಜೊತೆಗೆ 311 ಶಿಕ್ಷಣ ಸಂಸ್ಥೆ ಹೊಂದಿ ಅದರಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಪಡೆದಿದ್ದಾರೆ,18 ಸಾವಿರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ ಆರೋಗ್ಯ ಕ್ರಾಂತಿ ಮಾಡಲು ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ ರೋಗಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆ ಇರಲಿಲ್ಲ ಈಗ ಬೆಳಗಾವಿ ಆಸ್ಪತ್ರೆ ಅತ್ಯುತ್ತಮ ಸೇವೆ ನೀಡಿ ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥೆ ಕ್ರಾಂತಿ ಮಾಡುತ್ತಿದೆ.ಸ್ಯಾಟಲೈಟ್ ಪಾಲಿಕ್ಲಿನಿಕನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ದೊಡ್ಡ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸುವ ಉದ್ದೇಶ ಪಾಲಿಕ್ಲಿನಿಕದ್ದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಪ್ರಾಂಶುಪಾಲ ಡಾ.ಎಂ.ಜೆ.ಹಿರೇಮಠ ಮಾತನಾಡಿ ಉತ್ತರ ಕರ್ನಾಟಕದ 8 ಜಿಲ್ಲೆಯ 40 ತಾಲೂಕಿನ ಪಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ನುರಿತ ತಜ್ಞ ವೈದ್ಯರು, ಸುಸಜ್ಜಿತ ಆಸ್ಪತ್ರೆಯ ಕಟ್ಟಡ, ಉಚಿತ ವಾಹನ ವ್ಯವಸ್ಥೆ ಮುಖಾಂತರ ಈ ಕ್ಲಿನಿಕಗಳಲ್ಲಿ ಸೇವೆಯನ್ನು ಬರುವ ದಿನಗಳಲ್ಲಿ ನೀಡುತ್ತೇವೆ ಎಂದರು.
ಕೆ.ಎಲ್.ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ ಕಡು ಬಡವರ, ದೀನ ದಲಿತರಿಗೆ ಒಳ್ಳೆಯ ವೈದ್ಯಕೀಯ ಸೇವೆ ಒದಗಿಸಲು ಕೆ.ಎಲ್.ಇ ಸಂಸ್ಥೆ ಶಿಗ್ಗಾವಿಗೆ ಬಂದಿರುವುದು ಸಂತಸದ ಸಂಗತಿ. ಅಲ್ಲದೇ ಶಿಕ್ಷಣ, ಆರೋಗ್ಯ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಅವಕಾಶವನ್ನು ಕೊಡುವಂತಹ ವ್ಯವಸ್ಥೆಯನ್ನು ಕೆ.ಎಲ್.ಇ ಸಂಸ್ಥೆ ಮಾಡುತ್ತಿದೆ ಎಂದರು.ಉಪ ಕುಲಪತಿ ಡಾ.ನೀತೀನ ಗಂಗಾನೆ , ನಿರ್ದೇಶಕ ಡಾ. ವ್ಹಿ.ಡಿ.ಪಾಟೀಲ ಮಾತನಾಡಿದರು. ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಕೊಳ್ಳಿ, ಡಾ.ಬಸವರಾಜ ಸಜ್ಜನ, ಡಾ. ಬಿ.ಎಸ್.ಗೌಡರ, ಡಾ.ಪ್ರಭು ಪಾಟೀಲ, ಟಿ.ವ್ಹಿ.ಸುರಗೀಮಠ, ಜಯಣ್ಣ ಹೆಸರೂರ, ಡಾ.ಡಿ.ಎ.ಗೊಬ್ಬರಗುಂಪಿ, ಭರಮಜ್ಜ ನವಲಗುಂದ, ಚಂದ್ರು ಜವಳಿ, ಡಾ.ಅರುಣಕುಮಾರ ವಂದಿಸಿದರು.ಡಾ.ಶ್ರೀಕಾಂತ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.