ಗದಗ 10: ಮಕ್ಕಳಿಗೆ ಪಾಠ, ಪಠ್ಯೇತರ ಚಟುವಟಿಕೆಯ ಜೊತೆಗೆ ಸಂಸ್ಕಾರ ಹಾಗೂ ದೇಶಪ್ರೇಮ ಗುಣ ಬೆಳೆಸುವ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಕನರ್ಾಟಕ ಸ್ಟೇಟ್ ಮಿನರಲ್ಸ್ ಕಾಪರ್ೋರೇಶನ್ ಲಿಮಿಟೆಡ್ ಸಹಯೋಗದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನಿಮರ್ಿಸಲಾಗುತ್ತಿರುವ ಲಿಂಗದಾಳ, ನೀರಲಗಿ ಹಾಗೂ ಕಿರಟಗೇರಿ ಗ್ರಾಮಗಳ ನೂತನ ಶಾಲಾ ಕೊಠಡಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಗೆ ಒಟ್ಟು 10 ಶಾಲಾ ಕೊಠಡಿಗಳು ಮಂಜೂರಾಗಿದ್ದು, ಲಿಂಗದಾಳದ ಸಕಾ?ರಿ ಹೆಣ್ಣು ಮಕ್ಕಳ ಶಾಲೆಯ 5 ಕೊಠಡಿಗಳಿಗೆ 50 ಲಕ್ಷ, ನೀರಲಗಿ ಶಾಲೆಯ 3 ಕೊಠಡಿಗೆ 30 ಲಕ್ಷ ಹಾಗೂ ಕಿರಟಗೇರಿ ಶಾಲೆಯ 2 ಕೊಠಡಿಗೆ 20 ಲಕ್ಷ ಅನುದಾನ ಬಿಡುಗಡೆಯಾಗಿದೆ. ಶಿಥಿಲಗೊಂಡಿರುವ ಇನ್ನುಳಿದ ಕೊಠಡಿಗಳ ನಿಮರ್ಾಣಕ್ಕೂ ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸಲಾಗುವುದು. ಕಾಮಗಾರಿಗೆ ಮಣ್ಣು ಮಿಶ್ರಿತ ಮರಳು ಬಳಸದೇ, ಕೊಠಡಿಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸಬೇಕು. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಕ್ಕಳಿಗಾಗಿ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿಸಲು ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸತ್ಪ್ರಜೆಗಳನ್ನಾಗಿಸಿಬೇಕು ಎಂದರು.
ಕೆ.ಆರ್.ಐ.ಡಿ.ಎಲ್ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ, ವಸಂತ ಮೇಟಿ, ಪ್ರದೀಪ ನವಲಗುಂದ, ಅನೀಲ ನವಲಗುಂದ, ತಾಪಂ ಸದಸ್ಯೆ ವೀರಮ್ಮ ಜಾನುಪಂಥರ, ತಾಪಂ ಸದಸ್ಯೆ ಶಾಂತಾ ಮಲ್ಲನಗೌಡ್ರ, ಗ್ರಾಪಂ ಸದಸ್ಯ ಮಂಜುನಾಥ ದಾಟನಾಳ, ಗ್ರಾಪಂ ಸದಸ್ಯ ವಿ.ಆರ್. ಜಾನಪಂಥರ, ಗಿರಿಮಲ್ಲಪ್ಪ ಅಂಗಡಿ ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು