ಬಾಗಲಕೋಟೆ: ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರಧಾನ್ಯಗಳನ್ನು ಪೂರೈಸುವಂತೆ ಆಯಾ ತಾಲೂಕಿನ ಎಂ.ಎಸ್.ಪಿ.ಟಿ.ಸಿಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮೇಲ್ವಿಚಾರಣಾ ಸಮಿತಿಯ ಪೂರಕ ಪೌಷ್ಠಿಕ ಆಹಾರ ಸಾಮಗ್ರಿಗಳ ದರ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನಿರೀಕ್ಷಿತವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೂರೈಸಲಾದ ಆಹಾರಧಾನ್ಯ ಗುಣಮಟ್ಟವಾಗಿರದಿದ್ದಲ್ಲಿ ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುವುದೆಂದರು ಎಚ್ಚರಿಕೆ ನೀಡಿದರು. ಕಾಲಕಾಲಕ್ಕೆ ಅಧಿಕಾರಗಳು ಎಂ.ಎಸ್.ಪಿ.ಟಿ.ಸಿಯವರು ಪೂರೈಸಲಾದ ಆಹಾರಧಾನ್ಯಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿದರ್ೇಶನ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 2164 ಅಂಗನವಾಡಿಗಳು ಹಾಗೂ 57 ಮಿನಿ ಅಂಗನವಾಡಿ ಸೇರಿ ಒಟ್ಟು 2221 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಕೇಂದ್ರಗಳಿಗೆ ಗುಣಮಟ್ಟದ ಪೂರಕ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ಸಕಾಲಕ್ಕೆ ಪೂರೈಕೆ ಮಾಡಬೇಕು. ಪೂರೈಸಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರ ಸಾಮಗ್ರಿಗಳ ದರ ಪರಿಷ್ಕರಣೆ ಕಾರ್ಯವನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಹಾಗೂ ಗರಿಷ್ಠ 6 ತಿಂಗಳಿಗೊಮ್ಮೆ ಮಾಡಲಾಗುತ್ತಿದೆ. ಹೆಸರುಕಾಳು, ತೊಗರಿಬೇಳೆ, ಸಕ್ಕರೆ, ಬೆಲ್ಲ, ಕಡಲೆ ಬೀಜ, ಉಪ್ಪು, ಸಾಸುವೆ, ಒಣ ಮೆಣಸಿನಕಾಯಿ, ಹೆಸರುಬೇಳೆ, ಏಲಕ್ಕಿ, ಗೋದಿರವೆ ಹಾಗೂ ಸಾಂಬಾರು ಮಸಾಲಾಪುಡಿ ಸಾಮಗ್ರಿಗಳಿಗೆ ಆಯಾ ತಾಲೂಕಿನ ಎ.ಪಿ.ಎಂ.ಸಿ ಕಾರ್ಯದಶರ್ಿಗಳು ನೀಡಿರುವ ಮುಕ್ತ ಮಾರುಕಟ್ಟೆ ಹಾಗೂ ಆನ್ಲೈನ್ ಮಾರುಕಟ್ಟೆ ದರ ಆಧರಿಸಿ (ಪ್ರತಿ ಕ್ವಿಂಟಲ್) ದರ ಪರಿಷ್ಕರಣೆ ಮಾಡಲಾಯಿತು.
ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಒಟ್ಟು 218539 ಗುರಿಗೆ ಒಟ್ಟು 206594 ಫಲಾನುಭವಿಗಳು ಲಾಭ ಪಡೆದು ಪ್ರತಿಶತ 94.53 ರಷ್ಟು ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಬಾಣಂತಿಯರಲ್ಲಿ ಒಟ್ಟು 19508 ಗುರಿಗೆ 17882, ಅಂಗನವಾಡಿ ಕಾರ್ಯಕತರ್ೆಯರು ಒಟ್ಟು 2221 ಗುರಿಗೆ 2180, ಸಹಾಯಕಿಯರು ಒಟ್ಟು 2164 ಗುರಿಗೆ 2119 ಸಾಧಿಸಲಾಗಿದೆ. ಬಾಗಲಕೋಟೆ ತಾಲೂಕು ಶೇ.92.68 ರಷ್ಟು ಪ್ರಗತಿ ಸಾಧಿಸಿದರೆ, ಬೀಳಗಿ ಶೇ.97, ಹುನಗುಂದ ಶೇ.94.55, ಬಾದಾಮಿ ಶೇ.95.58, ಜಮಖಂಡಿ ಶೇ.95 ಹಾಗೂ ಮುಧೋಳ ಶೇ.92.1 ರಷ್ಟು ಸಾಧನೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಸರಕಾರ ನಿಗದಿಪಡಿಸಿದ ಪೂರಕ ಪೌಷ್ಠಿಕ ಆಹಾರದ ಮೆನೂವಿನನ್ವಯ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಿ.ಪಂ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಎ.ಕೆ.ಬಸಣ್ಣವರ, ಕೃಷಿ ಮಾರುಕಟ್ಟೆಯ ಇಲಾಖೆಯ ಸಹಾಯಕ ನಿದರ್ೇಶಕ ಎಸ್.ಎನ್.ಪತ್ತಾರ ಸೇರಿದಂತೆ ಆಯಾ ತಾಲೂಕಿನ ಶಿಶು ಅಬಿವೃದ್ದಿ ಯೋಜನಾಧಿಕಾರಿಗಳು, ಎಪಿಎಂಸಿ ಮಾರುಕಟ್ಟೆಯ ಕಾರ್ಯದಶರ್ಿಗಳು ಉಪಸ್ಥಿತರಿದ್ದರು.