ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ: ಹಿರೇಮಠ

ಅಥಣಿ  23:  ನಿರುದ್ಯೋಗ ಹಾಗೂ ಬಡತವನ್ನು ಹೋಗಲಾಡಿಸಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಿಜಲಿಂಗಯ್ಯಾ ಹಿರೇಮಠ ಹೇಳಿದರು

ಅವರು ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಧಾರವಾಡ ಜಿಲ್ಲಾ ಸಮನ್ವಯ ಅಧಿಕಾರಿ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ಶಿಕ್ಷಕ ಮಹಾದೇವ ಹುಲಗಜ್ಜಿ ಅವರು ತಂದೆ ಸ್ಮರಣಾರ್ಥ ನೆರೆ ಸಂತ್ರಸ್ಥ ಸರಕಾರಿ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ 450 ಮಕ್ಕಳಿಗೆ ಶೈಕ್ಷಣಿಕ ಪರಿಕರಣಗಳನ್ನು ವಿತರಿಸಿ  ಮಾತನಾಡಿದರು. ಕಲಿಕೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣ ಹಾಗೂ ನಗರ ಪ್ರದೇಶದ ಮಕ್ಕಳಷ್ಟೇ ತಿಳುವಳಿಕೆ ಹೊಂದಿದ್ದಾರೆ, ಆದರೆ ಅವರಿಗೆ ಸರಿಯಾದ ವೇದಿಕೆ ದೊರೆಯದ ಕಾರಣ ಅವರಲ್ಲಿರುವ ಪ್ರತಿಭೆ ಅಲ್ಲಿಯೇ ಮುರುಟಿ ಹೋಗುತ್ತಿದೆ, ಅವರಿಗೆ ಸರಿಯಾಗಿ ನ್ಯಾಯ ಒದಗಿಸಲು ಸರಕಾರಿ ಆಡಳಿತದೊಂದಿಗೆ ಪಾಲಕರು, ನಾಗರಿಕರು, ಶಿಕ್ಷಕರು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು ಕೇವಲ ಸೌಲಭ್ಯಗಳನ್ನು ನೀಡುವುದರಿಂದ ಪ್ರಗತಿ ಸಾಧ್ಯವಿಲ್ಲ, ಸೌಲಭ್ಯದ ಸರಿಯಾದ ಬಳಕೆಯ ತಿಳುವಳಿಕೆ ನೀಡಿದಾಗ ಮಾತ್ರ ಮಕ್ಕಳು ಪ್ರಗತಿ ಪಥದಲ್ಲಿ ಸಆಗಲು ಸಾಧ್ಯ ಎಂದರು.

ಮುಖ್ಯ ಶಿಕ್ಷಕ ಮಹಾದೇವ ಹುಲಗಜ್ಜಿ ಮಾತನಾಡಿ ನಾವು ಎಷ್ಟೆ ದೊಡ್ಡವರಾದರು ಹುಟ್ಟೂರು ಮರೆಯಬಾರದು. ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಜೀವನ ಸಾಗಿಸಬೇಕು, ಸಮಾಜದಿಂದ ದೊರೆತ ಎಲ್ಲ ಸಹಕಾರವನ್ನೂ ನೆನಪಿಟ್ಟುಕೊಮಡು ನಮ್ಮಿಂದಾದ ಅಳಿಲು ಸೇವೆಯನ್ನಾದರೂ ಸಮಾಜಕ್ಕೆ ನೀಡಬೇಕು ಎಂದ ಅವರು ಗ್ರಾಮೀಣ ಮಟ್ಟದಲ್ಲಿ ಮಕ್ಕಳಿಗೆ ಉತ್ತಮ ವಾಚನಲಾಯಗಳ ಕೊರತೆ ಇದೆ ಅವುಗಳನ್ನು ನೀಡುವುದರಿಂದ ಉನ್ನತ ಜ್ಞಾನ ಮಕ್ಕಳಿಗೆ ಸಿಗುವಂತಾಗುತ್ತದೆ ಎಂದರು ಈ ಸಂದಭ್ದಲ್ಲಿ ಅವರು ಗ್ರಾಮದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರಥಮ ಸ್ಥಾನ 20 ಸಾವಿರ ದ್ವಿತಿಯ ಸ್ಥಾನ 10 ಸಾವಿರ, ತೃತಿಯ ಸ್ಥಾನ 5 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಸಹ ಬಹುಮಾನ ನೀಡುವುದಾಗಿ ಹೇಳಿದರು. 

       ಈ ವೇಳೆ ಬಾಳಾಸಾಬ ಖವಟಕೋಪ್ಪ, ಪರಪ್ಪ ಯಲಿಗೌಡ, ಎಮ್ ಎಸ್ ತೇಲಿ, ನಿಂಗಪ್ಪ ನಂದೇಶ್ವರ, ಗಣಪತಿ ತುಬಚಿ, ಭಿಮರಾವ ಬಳವಾಡ, ಸಿದ್ದಪ್ಪ ಹಿಪ್ಪರಗಿ, ಗಿರೀಶ ಅಡಹಳ್ಳಿ, ಕೆ ಎಸ್ ಕಾಂಬಳೆ, ರಾಜಶೇಖರ ಪತ್ತಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.