ಲೋಕದರ್ಶನ ವರದಿ
ಕೊಪ್ಪಳ 09: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಗಳನ್ನು ಬೆನ್ನಟ್ಟಿಕೊಂಡು ಹೋಗಿ ಶಿಕ್ಷಣ ನೀಡಲಾಗುತ್ತಿದ್ದು, ಇದರಿಂದ ನಿಜವಾಗಿಯೂ ಶಿಕ್ಷಣ ಗುಣಮಟ್ಟ ಕುಸಿಯುತ್ತದೆ ಎನ್ನುವ ಆತಂಕ ಎದುರಾಗುತ್ತಿದೆ. ಆದರೆ, ಗುಣಮಟ್ಟ ಮತ್ತು ಮೌಲಾಧ್ಯರಿತ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಅವರು ಹೇಳಿದ್ದಾರೆ.
ನಗರದ ಕಿನ್ನಾಳ ರಸ್ತೆಯಲ್ಲಿ ಇರುವ ಎಜುಕೇರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಾಷರ್ಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಸ್ವರಾತ್ಮಕ ಯುಗದಲ್ಲಿ ಅಂಕಗಳು ಬೇಕೇಬೇಕು. ಆದರೆ, ಅದುವೇ ಪ್ರಾನವಾಗುವುದರಿಂದ ಮಕ್ಕಳಲ್ಲಿ ಇರುವ ಪ್ರತಿ ಕಮರಿ ಹೋಗಬಹುದು. ಆದ್ದರಿಂದ ಮಕ್ಕಳು ತೆರೆದ ಮನಸ್ಸಿನಿಂದ ಕಲಿಯುವಂತೆ ಆಗಬೇಕೆ ವಿನಃ ಒತ್ತಾಯಪೂರ್ವಕ ಕಲಿಕೆಯಾಗಬಾರದು.
ಪ್ರತಿಯೊಂದು ಮಗುವು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತದೆ. ಅದಕ್ಕೆ ಅದರದೆ ಆದ ಪ್ರತಿ ಇದ್ದೇ ಇರುತ್ತದೆ. ಆದರೆ, ಹೆಚ್ಚು ಅಂಕಗಗಳನ್ನು ಬೆನ್ನಟ್ಟುವ ರದಲ್ಲಿ ಬಾಡಿ ಹೋಗಬಾರದು. ಹೀಗಾಗಿ, ಶಿಕ್ಷಣ ಸಂಸ್ಥೆಗಳ ಹೆಚ್ಚು ಹೆಚ್ಚು ಅಂಕ ಪಡೆಯುವುದಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಮೌಲ್ಯಾಧರಿತ ಶಿಕ್ಷಣ ನೀಡುವುದಕ್ಕೂ ನೀಡಬೇಕು ಎಂದರು.
ಅನುದಾನರಹಿತ ಶಾಲಾ ಒಕ್ಕೂಟದ ಪ್ರಾನಕಾರ್ಯದಶರ್ಿ ಪ್ರಲ್ಲಾದ ಅಗಳಿ ಅವರು ಮಾತನಾಡಿ, ಮಕ್ಕಳ ಪ್ರತಿೆಯನ್ನು ಅರಳಿಸುವುದಕ್ಕೆ ಕೇವಲ ಶಾಲೆಯಲ್ಲಿ ಮಾಡುವ ಪಾಠ ಸಾಲದು, ಮನೆಯಲ್ಲಿಯೂ ಸೂಕ್ತ ವಾತಾವರಣ ಮತ್ತು ಪ್ರೋತ್ಸಾಹವನ್ನು ನೀಡುವಂತಾಗಬೇಕು.
ಶಾಲೆ ಮತ್ತು ಮನೆಯಲ್ಲಿ ಎರಡು ರೀತಿಯಿಂದಲೂ ಪ್ರೋತ್ಸಾಹ ಸಿಕ್ಕಲ್ಲಿ ಯಾವ ಮಗುವು ಸಹ ಕಲಿಯುವುದರಲ್ಲಿ ಹಿಂದೆ ಬೀಳಲು ಸಾಧ್ಯವೇ ಇಲ್ಲ. ಶಿಕ್ಷಕರು ಮತ್ತು ಪಾಲಕರು ಸಮಾನ ಹೊಣೆಗಾರರು ಎಂದರು.
ಎಜುಕೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ ಅವರುಮ ಮಾತನಾಡಿ, ಶಾಲೆಯಲ್ಲಿರುವ ವಿದ್ಯಾಥರ್ಿಗಳ ಅಭಿವೃದ್ಧಿಯನ್ನು ಶಿಕ್ಷಕರು ಮಾಡಿದರೇ ಶಾಲೆಯ ಅಭಿವೃದ್ಧಿ ಪಾಲಕರ ಕೈಯಲ್ಲಿ ಇರುತ್ತದೆ. ಶಾಲೆಯ ಬೆಳವಣಿಗೆಗೆ ಆ ಶಾಲೆಯ ಪಾಲಕರು ಪಾಲ್ಗೊಳ್ಳಬೇಕು. ಈ ವಿಷಯದಲ್ಲಿ ನಮ್ಮ ಎಜುಕೇರ ಆಂಗ್ಲಮಾಧ್ಯಮ ಶಾಲೆಯ ಪಾಲಕರು ಸದಾ ಶಾಲೆಯೊಂದಿಗೆ ಕೈಜೋಡಿಸುತ್ತಿರುವುದರಿಂದಲೇ ನಾಲ್ಕಾರು ವರ್ಷಗಳಲ್ಲಿಯೇ ಶಾಲೆ ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದರು.
ಕಾಯಕ ಎಜುಕೇಶನ್ ಟ್ರಸ್ಟ್ ಪ್ರಾನಕಾರ್ಯದಶರ್ಿ ನೀಲಾ ಪಾಟೀಲ, ಖಜಾಂಚಿ ಶುಾಂಗಿ ಅವರಾದಿ ವೇದಿಕೆಯ ಮೇಲೆ ಇದ್ದರು. ಆಡಳಿತಾಧಿಕಾರಿ ಗಿರೀಜಾಪತಿ ವಾಷರ್ಿಕ ವರದಿಯನ್ನು ಓದಿದದರು, ಶಿಕ್ಷಕಿಯರಾದ ಪ್ರೇಮಾ ಪಟ್ಟಣ ಶೆಟ್ಟಿ, ಸವಿತಾ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಅನ್ನಪೂರ್ಣ, ಖುಷಿ,ಸಿದ್ದಾರ್ಥ ಹಾಗೂ ಶರತ್ ನಿರೂಪಿಸಿದರು.