ಸರಕಾರದ ಯೋಜನೆ ಸದುಪಯೋಗಕ್ಕೆ ದಾಖಲೆ ಒದಗಿಸಿ : ಯಾಶೀರಖಾನ ಪಠಾಣ

Provide documentation for proper utilization of government schemes: Yashira Khan's plea

ಸರಕಾರದ ಯೋಜನೆ ಸದುಪಯೋಗಕ್ಕೆ ದಾಖಲೆ ಒದಗಿಸಿ : ಯಾಶೀರಖಾನ ಪಠಾಣ

ಶಿಗ್ಗಾವಿ 22: ಸರಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಅವಶ್ಯವಿರುವ ದಾಖಲೆಗಳನ್ನು ಒದಗಿಸಬೇಕು ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು.     ಪಟ್ಟಣದ ಸರಕಾರಿ ಅಂಬೇಡ್ಕರ್ ಸಂಕೀರ್ಣದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಮಾತನಾಡಿದ ಅವರು ಸಾರ್ವಜನಿಕರು ಅಹವಾಲು ಸಲ್ಲಿಸಲು ಬರುವಾಗ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದಾಗ ಅಂತಹ ಅರ್ಜಿಗಳು ವಿಲೇವಾರಿ ಆಗುತ್ತವೆ ಇಲ್ಲದೇ ಹೋದರೆ ತಿರಸ್ಕೃತ ಗೊಳ್ಳುತ್ತವೆ ಆದ್ದರಿಂದ ಸಾರ್ವಜನಿಕರು ಅರ್ಜಿ ಸಲ್ಲಿಸುವಾಗ ದಾಖಲೆಗಳನ್ನು ಒದಗಿಸಿದರೆ ನಾನು ಅಧಿಕಾರಿಗಳಿಗೆ ಕೆಲಸ ಮಾಡಿ ಕೊಡಲು ಹೇಳಬಹುದು.  ಇಲ್ಲದೇ ಹೋದರೆ ಕಷ್ಟಸಾಧ್ಯವಾಗುತ್ತದೆ ಎಂದು ಹೇಳಿದರು. ಆದರೂ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡು ಬಡವರ ನಿರ್ಗತಿಕರ ವಿಧವೆಯರನ್ನು ಪದೇ ಪದೇ ಅಲೆದಾಡಿಸದೇ ಅವರ ಕೆಲಸಗಳನ್ನು ಮಾಡಿ ಕೊಡಲು ಸೂಚಿಸಿದರು.  ಈ ಸಂದರ್ಭದಲ್ಲಿ ತಹಶಿಲ್ದಾರ ರವಿ ಕೊರವರ, ಪುರಸಭೆ ಸದಸ್ಯ ಗೌಸಖಾನ ಮುನಶಿ, ಕೆ.ಎಂ.ಎಫ್ ನಾಮ ನಿರ್ದೇಶಕ ಸದಸ್ಯ ಶಂಕರಗೌಡ ಪಾಟೀಲ,ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಾಬರ ಬೋವಾಜಿ, ಅತ್ತಾವುಲ್ಲಾಖಾನ ಖಾಜೇಖಾನವರ, ಸಂತೋಷ ಚಾಕಲಬ್ಬಿ, ಮುನ್ನಾ ಮಾಲ್ದಾರ, ಸಾಧಿಕ ಮಲ್ಲೂರ, ಆಶೀಫ್ ಮೊಹ್ಮದಸಾಬನವರ, ಸರತಾಜ ಹಾನಗಲ್ಲ, ಶಿವಾನಂದ ಕುನ್ನೂರ, ಹನುಮಂತಪ್ಪ ಭಾರಂಗಿ ಉಪಸ್ಥಿತರಿದ್ದರು.