ಕಲಾವಿದರಿಗೆ ಆಥರ್ಿಕ ಸಹಾಯ ಒದಗಿಸಲು ಆಗ್ರಹ

ಲೋಕದರ್ಶನವರದಿ

ಬಳ್ಳಾರಿ08: ಮಾಹಮಾರಿ ಕರೋನಾ ವೈರಸ್ ರೋಗ ಇಡೀ ವಿಶ್ವಾದ್ಯಂತ ವ್ಯಾಪಿಸಿದ್ದು, ಲಾಕ್ಡೌನ್ ಪರಿಣಾಮದಿಂದ ಕಲೆಯನ್ನೇ ನಂಬಿಕೊಂಡು ಬದುಕುತ್ತಿರುವ ಕಲಾವಿದರ ಬದುಕು ಅತಂತ್ರವಾಗಿದೆ.

        ಜಾತ್ರೆಗಳು, ಹಬ್ಬ ಹರಿದಿನಗಳು,ಕಲಾ ಪೋಷಕರಿಂದ, ಗಣ್ಯ ವ್ಯಕ್ತಿಗಳ ಪುಣ್ಯತಿಥಿ ಕಾರ್ಯಕ್ರಮಗಳ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಾಯೋಜನ ಕಾರ್ಯಕ್ರಮಗಳಿಂದ ಕಲಾವಿದರಿಗೆ ಸಹಾಯ ವಾಗುತ್ತಿತ್ತು. ಲಾಕ್ಡೌನ್ ಕಾರಣದಿಂದ ಎಲ್ಲಾ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಸಕರ್ಾರದ ವತಿಯಿಂದ ಕಲಾವಿದರಿಗೆ 2000 ರೂ. ಸಹಾಯಧನ ನೀಡುತ್ತಿದೆ. ಮಾಸಾಶನ ಪಡೆಯುತ್ತಿರುವ ಕಲಾವಿದರಿಗೆ 1500 ನೀಡುತ್ತಿದೆ. ಆದರೆ ಹಣದಿಂದ ಜೀವನ ನಡೆಸುವುದು ಕಷ್ಟ. ಆದಕಾರಣ ಮಾಸಾಶನ ಕಲಾವಿದರಿಗೆ ಮತ್ತು ಕಲಾವಿದರಿಗೆ ಪ್ರತಿ ತಿಂಗಳು 5000 ರೂ. ಸಹಾಯಧನ ನೀಡಬೇಕು ಎಂದು ರಾಘವ ಮೆಮೋರಿಯಲ್ ಅಸೋಸಿಯೇಶನ್  ಜಿಲ್ಲಾಧಿಕಾರಿ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದೆ.

      ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಕೆ ಚನ್ನಪ್ಪ, ಗೌರವ ಕಾರ್ಯದಶರ್ಿ ರಮೇಶ್ ಗೌಡ ಪಾಟೀಲ್, ಉಪಾಧ್ಯಕ್ಷ ಎನ್ ಬಸವರಾಜ್, ಸದಸ್ಯರುಗಳಾದ ಕೆ. ಮಧುಸೂದನ,ಜೆ. ಪ್ರಭಾಕರ, ಕೆ. ಚಂದ್ರಶೇಖರ,ಹೆಚ್. ರಾಮೇಶ್ವರ, ಕಾಳಿದಾಸ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೀಣಾ ಕುಮಾರಿ, ಸುಜಾತಮ್ಮ, ವರಲಕ್ಷ್ಮಿ, ಕಲಾವಿದರಗಳಾದ ಆಂಬರೇಶ,ನಾಡಂಗ ಬಸವರಾಜ್, ಇಂದ್ರಾಣಿ, ಲತಾ, ನಾಗನಗೌಡ, ಪಾಂಡುರಂಗಪ್ಪ ಇನ್ನಿತರರು ಇದ್ದರು