ನವದೆಹಲಿ, ಮೇ 21, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿ ಅಂಗವಾಗಿ ಅವರ ಪುತ್ರ ಹಾಗೂ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಂದೆಗೆ ಗೌರವ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಸಂತೋಷವಿದೆ.
ಪ್ರಧಾನ ಮಂತ್ರಿಯಾಗಿ ರಾಜೀವ್ ಗಾಂಧಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ರಾಷ್ಟ್ರವನ್ನು ಸಬಲೀಕರಣಗೊಳಿಸಲು ಅವರು ಅನೇಕ ಅಗತ್ಯ, ಪೂರಕ ಕ್ರಮ ಕೈಗೊಂಡಿದ್ದಾರೆ. ಪುಣ್ಯ ತಿಥಿಯಂದು ಅವರಿಗೆ ಪ್ರೀತಿ ಮತ್ತು ಕೃತಜ್ಞತೆಯಿಂದ ವಂದಿಸುತ್ತೇನೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.ರಾಜೀವ್ ಗಾಂಧಿ ಅವರು 1991 ರ ಮೇ. 21 ರಂದು ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರಂಬುದೂರ್ ಗೆ ಬಂದಿದ್ದ ಸಮಯದಲ್ಲಿ ಎಲ್ ಟಿಟಿಇ ಮಾನವ ಬಾಂಬ್ ದಾಳಿಗೆ ಮಾಜಿ ಪ್ರಧಾನಿ ಬಲಿಯಾಗಿದ್ದರು. ರಾಜೀವ್ ಗಾಂಧಿ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ಅನೇಕ ನಾಯಕರು ಅವರಿಗೆ ಗೌರವ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.