ಪ್ರತ್ಯೇಕ ರಾಜ್ಯ ಹೋರಾಟ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ


ಬೆಳಗಾವಿ : ಉತ್ತರ ಕನರ್ಾಟಕ ಅಭಿವೃದ್ಧಿಯಾಗಿಲ್ಲ ಎಂಬ ನೆಪದಲ್ಲಿ ಪ್ರತ್ಯೇಕ ಉ.ಕ. ರಾಜ್ಯ ಕೇಳುವುದನ್ನು ಬಲವಾಗಿ ವಿರೋಧಿಸಿರುವ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತ್ಯೇಕ ರಾಜ್ಯ ಬೇಡ. ಆದರೆ ಉ.ಕ. ಅಭಿವೃದ್ಧಿಯಾಗಲೇ ಬೇಕೆಂದು ಒತ್ತಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಪ್ರತ್ಯೇಕ ರಾಜ್ಯ ಹೋರಾಟಕ್ಕೆ ದಿಕ್ಕಾರ, ಅಖಂಡ ಕನರ್ಾಟಕಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಉತ್ತರ ಕನರ್ಾಟಕದ ಸಮಗ್ರ ಅಭಿವೃದ್ಧಿಯಾಗಬೇಕೆಂದು ಒತ್ತಾಯಿಸಿದರು.

ಉತ್ತರ ಕನರ್ಾಟಕ ಅಭಿವೃದ್ಧಿಯಾಗಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಪ್ರತ್ಯೇಕ ರಾಜ್ಯ ಕೇಳವುದು ಸರಿಯಲ್ಲ. ಜನಪ್ರತಿನಿಧಿಗಳ ಕಿವಿ ಹಿಂಡಿ ಕೆಲಸ ಮಾಡಿಸಿಕೊಳ್ಳಬೇಕೆ ಹೊರತು ಪ್ರತ್ಯೇಕ ರಾಜ್ಯ ಕೇಳವುದಲ್ಲ ಎಂದು ಸಂಘಟನೆ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ಉತ್ತರಕನರ್ಾಟಕ ಹೊರತು ಪಡಿಸಿ ರಾಜ್ಯದ ಉಳಿದೆಲ್ಲ ಪ್ರದೇಶಗಳು ಅಭಿವೃದ್ಧಿ ಕಂಡಿವೆ. ಆದರೆ ಉ.ಕ. ಪ್ರದೇಶಗಳು ಈ ವರೆಗಿನ ಎಲ್ಲ ರಾಜ್ಯ ಸರಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಾಜೀದ ಹಿರೇಕುಡಿ, ಪ್ರಭು ಕಾಕತೀಕರ, ನಾಗೇಶ ಕೊಪ್ಪದ, ರವಿ ಹಿರೇಮಠ, ಸೈಫುಲ್ಲಾ ಭಾಗವಾನ, ರೇಷ್ಮಾ ಕಿತ್ತುರ, ಮಲ್ಲಿಕಾ ವಾಗಿ ಮುಂತಾದವರು ಇದ್ದರು.