ಹೈಮಾಸ್ಕ ದೀಪಗಳ ಅಸಮರ್ಪಕ ನಿರ್ವಹಣೆ ಖಂಡಿಸಿ ಕರವೇ ಪ್ರತಿಭಟನೆ

ಲೋಕದರ್ಶನ ವರದಿ

ಶಿರಹಟ್ಟಿ 27: ಶಿರಹಟ್ಟಿ ಪಟ್ಟಣದ ಪಂಚಾಯತಿ ವ್ಯಾಪ್ತಿಯಲ್ಲಿನ ಮಾಗಡಿ ರಸ್ತೆ ಮತ್ತು ಛಬ್ಬಿ ರಸ್ತೆಯಲ್ಲಿರುವ ಹೈಮಾಸ್ಕ ದೀಪಗಳು ಹತ್ತದೇ ಮೂರು ವರ್ಷಗಳೇಗತಿಸಿವೆ. ಈವರೆಗೆ ಸಾಕಷ್ಟು ಭಾರಿ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಹಿತ ನಿರ್ಲಕ್ಷ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಹೈ ಮಾಸ್ಕ ದೀಪಗಳು ಹತ್ತದೇ ಹೋದರೆ ಪ್ರತಿಭಟನೆಗೆ ಮುಂದಾಗಲಾಗುವುದು ಎಂದು ಕರವೇ (ಪ್ರವೀಣಶೆಟ್ಟಿ ಬಣ) ತಾಲೂಕಾಧ್ಯಕ್ಷ ರಫಿಕ ಕೆರಿಮನಿ ಹಾಗೂ ಕಾರ್ಯಕರ್ತರು ಪಟ್ಟಣ ಪಂಚಾಯತ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಪಟ್ಟಣದಲ್ಲಿ ಮಾಗಡಿ ರಸ್ತೆ, ಕೆಲ ವೃತ್ತಗಳಲ್ಲಿ ಮತ್ತು ಛಬ್ಬಿ ರಸ್ತೆಯಲ್ಲಿರುವ ಹೈ ಮಾಸ್ಕ ದೀಪಗಳು ಹತ್ತದೇ  ಮೂರು ವರ್ಷಗಳೆ ಗತಿಸಿವೆ, ನಮ್ಮ ಯೋಜನೆ ಅನುಷ್ಠಾನ, ಇಂದಿರಾ ಕ್ಯಾಂಟೀನ್ ಆರಂಭಕ್ಕೆ  ಪಪಂ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಪ್ರತಿ ಭಟನೆಯನ್ನು ನಡೆಸಿದರು. 

ಪಟ್ಟಣದಲ್ಲಿ ಮೂರು ವರ್ಷಗಳಿಂದ ಹೈ ಮಾಸ್ಕ ದೀಪಗಳು ಉರಿಯದೇ ಹಾಗೆ ತೆಲೆಎತ್ತಿ ನಿಂತಿವೆ. ಇವುಗಳ ಸಮರ್ಪಕ ನಿರ್ವಹಣೆ ಇಲ್ಲದೇ ಪಟ್ಟಣದ ಕತ್ತಲಲ್ಲಿ ಮುಳಗಿದೆ. ರಾತ್ರಿ ಸಂಚಾರ ಮಾಡುವುದು ದುಸ್ತರವಾಗಿದೆ. ಜೊತೆಗೆ ಪಟ್ಟಣದ ನಮ್ಮ ಮನೆ ಯೋಜನೆ ಅನುಷ್ಠಾನಕ್ಕೆ ಸಂಬಂದಿಸಿದಂತೆ ಈ ವರೆಗೆ ಯಾವುದೇ ನಿಧರ್ಾರವನ್ನು ಕೈಗೊಳ್ಳದೇ ಅನುಷ್ಠಾನ ಗೊಳಿಸುವುಲ್ಲಿ ನಿರ್ಲಕ್ಷ ಧೋರಣೆಯನ್ನು ಅನುಸರಿಸುತ್ತಿದೆ. ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಿಶೀಘ್ರವಾಗಿ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಲು ಅವಕಾಶವನ್ನು ನೀಡಿಬೇಕು.

 ಪಟ್ಟಣದಬಡವರ ಹಸಿವನ್ನು ನೀಗಿಸುವುದಕ್ಕಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಿ ನಾಲ್ಕೈದು ತಿಂಗಳು ಗತಿಸಿದ್ದರೂ ಸಹಿತ  ಈವರೆಗೆ ಕಾರ್ಯಾರಂಭ ಮಾಡದೇ ಇರುವುದು ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗೆ ಹಲವಾರು ಸಂಗತಿಗಳು ಪಟ್ಟಣದಲ್ಲಿ ನಿರ್ಲಕ್ಷಕ್ಕೆ ಒಳಗಾಗಿವೆ. ಇಂತಹ ನಿರ್ಲಕ್ಷ ಧೋರಣೆಯನ್ನು ಅನುಸರಿಸಿದರೆ ಪಟ್ಟಣದ ಪಂಚಾಯತಿ ಎದರು ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು. ಈ ಮೇಲಿನ ಎಲ್ಲ ಬೇಡಿಕೆಗಳನ್ನು 21 ದಿನಗಳ ಒಳಗಾಗಿ ಈಡೇರಿಸದೇ ಹೋದರೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಢಳಿತದ ಎದುರು ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. 

ಈ ಸಂದರ್ಭದಲ್ಲಿ ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಕಾರ್ಯಕರ್ತರಾದ ದೇವಪ್ಪ ಬಟ್ಟೂರ, ಗೌಸುಸಾಬ ಕಲಾವಂತ, ಈರಣ್ಣ ಬಾಗೇವಾಡಿ, ಮನಸೂರಅಹ್ಮದ ಮಕಾನದಾರ, ಕಾದರಸಾಬ ಪಟಾಲ, ಇಲಿಯಾಸ ಮೀರಾನವರ, ಕಲಾವತಿ ನಾವ್ಹಿ, ಶಾಹಿರಾಬಾನು ಒಚಿಟಿ, ಶೋಭಾ ಬಳಿಗೇರ, ಯೋಗಿತಾ ದೇಸಾಯಿಪಟ್ಟಿ, ರೇಖಾ ಮುಧೋಳಕರ, ವಿಜಯಲಕ್ಷ್ಮೀ ತಳವಾರ, ಮುಂತಾದವರು ಉಪಸ್ಥಿತರಿದ್ದರು.