ಲೋಕದರ್ಶನವರದಿ
ರಬಕವಿ-ಬನಹಟ್ಟಿ೧೧ : ಹೊಸೂರ ಗ್ರಾಮದಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಮಂಗಳವಾರ ಗ್ರಾಮದ ರಸ್ತೆ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ನಿತ್ಯ ತೇರದಾಳ, ಜಮಖಂಡಿ, ಮಹಾಲಿಂಗಪುರದ ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ.
ಸಾರ್ವಜನಿಕರು ಕೂಡ ವಿವಿಧ ಕೆಲಸಗಳಿಗೆ ಹೋಗಿ ಬರುತ್ತಾರೆ. ಆದರೆ, ಗ್ರಾಮದಲ್ಲಿ ಬಸ್ ನಿಲುಗಡೆಯಿಲ್ಲ. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ಗಾಗಿ ಒಂದು ಕಿ.ಮೀ ದೂರದಲ್ಲಿರುವ ರಬಕವಿ ಮತ್ತು ಒಂದುವರೆ ಕಿ.ಮೀ ದೂರದಲ್ಲಿರುವ ಬನಹಟ್ಟಿಗೆ ಹೋಗಬೇಕಾಗಿದೆ. ಇದರಿಂದ ಸಾಕಷ್ಟು ತೊಂದರೆಯಾಗಿದೆ ಎಂದು ವಿದ್ಯಾರ್ಥಿ ಮುಖಂಡ ಶಿವಾನಂದ ಕೊಣ್ಣೂರ ಅಳಲು ತೋಡಿಕೊಂಡರು.
ಬನಹಟ್ಟಿಯ ಕೆಎಸ್ಆರ್ಟಿಸಿ ಅಧಿಕಾರಿ ದೇವೇಂದ್ರ ಪತ್ತಾರ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಬಸ್ ನಿಲುಗಡೆ ಸಂಬಂಧ ಮೇಲಧಿಕಾರಿಗಳ ಜತೆ ಚಚರ್ಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ಹಿಂಪಡೆದರು. ಕಾಡಪ್ಪ ಇಂಗಳಗಾವಿ, ಮಂಜು ಡವಳಗಿ, ಮಲ್ಲಪ್ಪ ನಾವಿ, ಸಾಗರ ಜಗದಾಳ, ವಿನಾಯಕ ಕಾಂತಿ, ಬಸವರಾಜ ಬುಗಟಿ, ಸಂತೋಷ ಇಂಗಳಗಾವಿ ಇದ್ದರು.