ಕಾರ್ಮಿಕ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ

ಲೋಕದರ್ಶನ ವರದಿ

ಬೈಲಹೊಂಗಲ 9:  ಅಖಿಲ ಭಾರತ ಮುಷ್ಕರದ ಅಂಗವಾಗಿ ಪಟ್ಟಣದ ರೈತ ಭವನದಲ್ಲಿ ವಿವಿಧ ಕಾಮರ್ಿಕ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

     ರಾಜ್ಯದಲ್ಲಿ 61 ಸಾವಿರ ಗ್ರಾಪಂ ನೌಕರರು ಬಿಲ್ ಕಲೆಕ್ಟರ್,  ಕ್ಲಕ್, ವಾಟರ್ ಮನ್, ಸಿಪಾಯಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 2006 ರಲ್ಲಿ ಸರ್ಕಾರ  ಇವರಿಗೆ ಕನಿಷ್ಠ ವೇತನ ಜಾರಿ ಮಾಡಿತ್ತು. ಸಕರ್ಾರ ಕನಿಷ್ಠವೇತನ ನಿಗದಿಗೂ ಇದ್ದರೂ ಅವರಿಗೆ ಸರಿಯಾದ ಸಮಯಕ್ಕೆ ವೇತನ ಕೈಸೇರದೇ ಇರುವುದರಿಂದ    ಜೀವನ ನಡೆಸುವದು ತುಂಬಾ ಕಷ್ಟವಾಯಿತು.  

2017 ರಲ್ಲಿ ಪಂಚಾಯತ್ ನೌಕರರಿಗೆ ಇಎಫ್ ಎಂಎಸ್ ಮೂಲಕ ಸರಕಾರದ ನಿಧಿಯಿಂದ ವೇತನ ಭರಿಸುವುದಾಗಿ ಹೇಳಿ ಮರ್ಚ್  2018 ರಿಂದ ವೇತನ ನೀಡುವುದನ್ನು ಜಾರಿ ಮಾಡಲಾಗುವುದೆಂದು ಹೇಳಿತ್ತು. ಎರಡು ವರ್ಷ ಕಳೆಯುತ್ತಾ ಬಂದರೂ ಇನ್ನೂವರೆಗೆ ಗ್ರಾ.ಪಂ ನೌಕರರಿಗೆ ಇಎಫ್ಎಂಎಸ್ ಮೂಲಕ ಸರಕಾರದ ನಿಧಿಯಿಂದ ವೇತನ ಪಾವತಿಯಾಗಿಲ್ಲ. 

2007 ರಿಂದ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಗಳಿಗೆ ಸರಕಾರವು 10.9.2014 ರಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು  ಸೃಷ್ಟಿ ಮಾಡಿ ಐದು ವರ್ಷ ಕಳೆದರೂ ಬಹಳಷ್ಟು ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಜಿಲ್ಲಾ ಪಂಚಾಯತ್ ಅನುಮತಿ ನೀಡಿಲ್ಲ ಕೂಡಲೇ ಬಾಕಿ ಉಳಿದಿರುವ ಅನುಮೋದನೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಎಫ್ಎಂಎಸ್ ಮೂಲಕ  ವೇತನ ನೀಡಲು  ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕನಿಷ್ಠ ವೇತನ 21 ಸಾವಿರ ರೂ ನಿಗದಿಪಡಿಸಬೇಕು. ಗ್ರಾಪಂ ನೌಕರರಿಗೆ ವೇತನ ನೀಡಲು ಪೂರ್ತಿ ಯಾಗಿರುವ   390     ರೂ. ಕೋಟಿ ಹಣವನ್ನು ಬಿಡುಗಡೆಗೊಳಿಸಬೇಕು. 

ಎಂಎಸ್ ಸ್ವಾಮಿ ವರದಿಯನ್ನು ಜಾರಿಗೆಣಟಿಜಜಜಿಟಿಜಜಳಿಸಬೇಕು ಗ್ರಾಪಂ ನೌಕರರಿಗೆ ಸೇವಾ ನಿಯಮಾವಳಿ ರಚಿಸಬೇಕು ಗ್ರಾಪಂ ನೌಕರರಿಗೆ ಪೆನ್ಷನ್ ಯೋಜನೆ ಜಾರಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.                 

 ಗ್ರಾ. ಪಂ ನೌಕರರ ಸಂಘದ ಮುಖಂಡರಾದ ಸಂಜಯ್ ಹೊಸಮನಿ, ರುದ್ರಗೌಡ ಪಾಟೀಲ್, ಪ್ರಕಾಶ ಬಸಾಪುರ, ಬಸವರಾಜ ಅಂಬಡಗಟ್ಟಿ, ಯಲ್ಲನಗೌಡ ಪಾಟೀಲ್, ಅಂಗನವಾಡಿ ಅಕ್ಷರದಾಸೋಹ ಸಂಘಟನೆಯ ಸುಮನ್ ಕಮ್ಮಾರ,  ಚನ್ನಮ್ಮ ಹಿರೇಮಠ ಇತರರು ಉಪಸ್ಥಿತರಿದ್ದರು.