ಸಿಎಎ ವಿರೋಧಿಸಿ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ನಂಜಯ್ಯನಮಠ

ಗುಳೇದಗುಡ್ಡ21: ಕೇಂದ್ರ ಸರ್ಕಾರ  ಜಾರಿಗೆ ತಂದಿರುವ ಪೌರತ್ವ  ಕಾನೂನು ಅವೈಜ್ಞಾನಿಕವಾಗಿದೆ. ದೇಶದ ಸಮಗ್ರತೆಗೆ ಭಂಗ ತರುವಂತಹದ್ದು ಹಾಗೂ ದೇಶವನ್ನು ಒಡೆಯುವಂತಹದ್ದು. ಕೇಂದ್ರ ಸರ್ಕಾರ  ಅದನ್ನು ಮರು ಪರಿಶೀಲಿಸಬೆಕೇಂದು  ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.

     ಅವರು ಕೇಂದ್ರ ಸರ್ಕಾರ  ಜಾರಿಗೆ ತಂದಿರುವ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕಾನೂನುಗಳನ್ನು ವಿರೋಧಿಸಿ ಇಲ್ಲಿನ ಅಂಜುಮನ್-ಎ-ಇಸ್ಲಾಂ ಕಮೀಟಿ ಮತ್ತು ಪಟ್ಟಣದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ದೇಶದ ಅಧಿಕಾರದಲ್ಲಿದಲ್ಲಿರುವ ಸರ್ಕಾರ  ಜನರಲ್ಲಿ ಉತ್ತಮ ಬಾಂಧವ್ಯ ಸೃಷ್ಠಿಸಬೇಕೇ ವಿನ: ದೇಶ ಒಡೆಯುವ ಕೆಲಸ ಮಾಡೆಬಾರದೆಂದು ಹರಿಹಾಯ್ದರು.

      ಜಿಲ್ಲಾ ಕರವೇ ಅಧ್ಯಕ್ಷ ರಮೇಶ ಬದ್ನೂರ್, ಸಂಜಯ ಬರಗುಂಡಿ,  ಉಸ್ಮಾನಗಣಿ ಹುಮನಾಬಾದ್, ಕಾಂಗ್ರೇಸ್ ಮುಖಂಡ ಹೊಳಬಸು ಶೆಟ್ಟರ ಮಾತನಾಡಿದರು.

      ಮಫ್ತಿ ಅಬೂಬ್ಕರ್ ಸಕಾಫೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಡಾ.ದಸ್ತೀರ್ ಮುಲ್ಲಾ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶ  ಅಮ್ಮೀದ್ ವಾಹಾಬ್, ಮುಫ್ತಿ ಕಾಸೀಂಸಾಬ್, ಮುಬಾರಕ್ ಮಂಗಳೂರ ಅಂಜುಮನ್-ಎ-ಇಸ್ಲಾಂ ಸಮಿತಿಯ ಅಧ್ಯಕ್ಷ ಜಹಾಂಗೀರ ಇಲ್ಯಾಳ, ಉಪಾಧ್ಯಕ್ಷ ರಜಾಕ್ ಕುದರಿ, ರಫೀಕ್ ಯಾಳಗಿ, ಸಲೀಮ ಮೋಮಿನ್, ಪರಶುರಾಮ್ ಮಹಾಜನ್, ರಫೀಕ್ ಸೂಳಿಭಾವಿ, ಜಮೀರ್ ಮೌಲ್ವಿ, ಎಂ.ಎಂ.ಕಾಂಟ್ರಾಕ್ಟರ್, ನಬಿಸಾಬ್ ಮುಜಾಹೀದ್, ವೈ.ಆರ್.ಹೆಬ್ಬಳ್ಳಿ, ನಾಗಪ್ಪ ಗೌಡ್ರ, ಯಮನಪ್ಪ ಮಾದರ್,  ರಫೀಕ್ ಕಲ್ಬುಗರ್ಿ, ಶ್ರೀಕಾಂತ ಹುನಗುಂದ  ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

       ಮೆರವಣಿಗೆ: ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಿಂದ ಮೆರವಣಿಗೆ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಗೆ ಬಂದು ಸಭೆಯಾಗಿ ಮಾರ್ಪಟ್ಟಿತು. ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಹಾಗೂ ಕಾಂಗ್ರಸ್  ಮುಖಂಡರು ಪಾಲ್ಗೊಂಡಿದ್ದರು.