ಕೊಚ್ಚಿ, 26 ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾಗಿರುವ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರೊಂದಿಗಿದ್ದ ಆರು ಮಹಿಳೆಯರಲ್ಲಿ ಒಬ್ಬರಾದ ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಉಪನ್ಯಾಸಕಿಯ ಮೇಲೆ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಕಾರದ ಪುಡಿ ಎರಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ದೇಗುಲ ಪ್ರವೇಶಿಸಲು ರಕ್ಷಣೆ ಕೋರಿರುವ ಸಲುವಾಗಿ ಉಪನ್ಯಾಸಕಿ ಬಿಂದು ಅಮ್ಮಿನಿ ಮತ್ತು ತೃಪ್ತಿ ದೇಸಾಯಿ ಆಯುಕ್ತರ ಕಚೇರಿಗೆ ತಲುಪಿದಾಗ ಬಲಪಂಥೀಯ ಕಾರ್ಯಕರ್ತರ ಗುಂಪೊಂದು ಅವರೊಂದಿಗೆ ವಾಗ್ವಾದಕ್ಕಿಳಿದು ಬಿಂದು ಮುಖಕ್ಕೆ ಕಾರದಪುಡಿ ಎರಚಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ತೃಪ್ತಿ ದೇಸಾಯಿ, ಅಯ್ಯಪ್ಪ ದೇವರ ದರ್ಶನ ದೊರೆತರೆ ಮಾತ್ರ ಕೇರಳ ಬಿಡುವುದಾಗಿ ಹೇಳಿಕೆ ನೀಡಿದ್ದಾರೆ. ಪುಣೆ ಮೂಲದ ಕಾರ್ಯಕತರ್ೆ ತೃಪ್ತಿ ಕಳೆದ ವರ್ಷದ ನವೆಂಬರ್ ನಲ್ಲಿ ದೇಗುಲ ಪ್ರವೇಶಿಸುವ ವಿಫಲ ಪ್ರಯತ್ನ ನಡೆಸಿದ್ದರು. ಅಮ್ಮಿನಿ 2019ರ ಜನವರಿ 2ರಂದು ಪೊಲೀಸ್ ರಕ್ಷಣೆಯೊಂದಿಗೆ ದೇಗುಲ ಪ್ರವೇಶಿಸಿದ್ದು, ಇದು ಅವರ ಎರಡನೇ ಯತ್ನಾಗಿದೆ. 2018ರ ಸೆ.28ರಂದು ಸುಪ್ರೀಂಕೋರ್ಟ, ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ತೀಪು