ಲೋಕದರ್ಶನ ವರದಿ
ಬೆಳಗಾವಿ,20-ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ವಿಫಲವಾಗುತ್ತಿರುವ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮತ್ತು ಬಂದ್ ಆಚರಿಸುತ್ತಿರುವ ಅಥಣಿ ಹಾಗೂ ಇತರ ಕೃಷ್ಣಾ ತೀರದ ಜನತೆಯನ್ನು ಬೆಂಬಲಿಸಿ ಕನ್ನಡಪರ ಮತ್ತು ರೈತಪರ ಸಂಘಟನೆಗಳ ಮುಖಂಡರು ಇಂದು ಸೋಮವಾರ ಮುಂಜಾನೆ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಿಗೆ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
"ಕೃಷ್ಣಾ ನದಿಗೆ ಕೊಯ್ನಾ ನೀರು ಬಿಡುಗಡೆ ಮಾಡಲೇಬೇಕು" ಎಂಬ ಘೋಷಣೆಗಳನ್ನು ಹಾಕುತ್ತ ಜಿಲ್ಲಾಧಿಕಾರಿಗಳ ಕಚೇರಿಯನ್ನು ಪ್ರವೇಶಿಸಿದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಬೂದಪ್ಪ ಅವರಿಗೆ ಮನವಿ ಸಲ್ಲಿಸಿದರು. ಹಿಡ್ಕಲ್ ಜಲಾಶಯದಿಂದ 94 ಕೀ.ಮಿ. ದೂರದ ಕೃಷ್ಣಾ ನದಿಗೆ ಒಂದು ಟಿ.ಎಂ.ಸಿ. ನೀರು ಹರಿಸುವ ನಿಧರ್ಾರ ಅತ್ಯಂತ ಅವೈಜ್ಞಾನಿಕವಾಗಿದ್ದು ಇಂದು ಮುಂಜಾನೆ ಬಿಟ್ಟ ನೀರು ಕೃಷ್ಣಾ ನದಿಯನ್ನು ತಲುಪಲು ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮಹಾರಾಷ್ಟ್ರಕ್ಕೆ ಸರ್ವಪಕ್ಷೀಯ ನಿಯೋಗ ಕಳಿಸಿ ಕೊಯ್ನಾದಿಂದ ನೀರು ಬಿಡಿಸಬೇಕೇ ಹೊರತು ಇಲ್ಲಯೇ ಕುಳಿತು ಪತ್ರಗಳನ್ನು ಬರೆಯುವದರಿಂದ ಪ್ರಯೋಜನವಾಗುವದಿಲ್ಲವೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ವಿವರಿಸಿದರು.
ರೈತ ಹೋರಾಟಗಾರ ಸಿದ್ಧಗೌಡ ಮೋದಗಿ ಅವರು ಮಾತನಾಡಿ, ಕೇವಲ ಹಿರಿಯ ಅಧಿಕಾರಿಗಳನ್ನು ಮುಂದು ಮಾಡಿದರೆ ಮಹಾರಾಷ್ಟ್ರವು ನೀರು ಬಿಡುಗಡೆ ಮಾಡುವದು ಸಾಧ್ಯವಿಲ್ಲ. ನೀರಾವರಿ ಸಚಿವರು, ಶಾಸಕರನ್ನೊಳಗೊಂಡ ನಿಯೋಗವನ್ನು ಮುಂಬಯಿಗೆ ಕಳಿಸಬೇಕು ಎಂದರು.
ನಂತರ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ರಮೇಶ ಕಳಸದ ಅವರನ್ನು ಮುಖಂಡರು ಭೆಟ್ಟಿಯಾಗಿ ಮನವಿ ಸಲ್ಲಿಸಿದರು. ತೀವ್ರ ನೀರಿನ ಬವಣೆಯುಂಟಾಗಿದ್ದು ಹಿಡ್ಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿರುವದು ವ್ಯರ್ಥ ಸಾಹಸವಾಗಿದೆಯೆಂದು ಮುಖಂಡರು ಪ್ರತಿಪಾದಿಸಿದರು.
ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಶಿವಪ್ಪ ಶಮರಂತ, ದೀಪಕ ಗುಡಗನಟ್ಟಿ, ಸಾಗರ ಬೋರಗಲ್ಲ, ಶ್ರೀಮತಿ ಗೌರಿ ಲಮಾಣಿ, ರಾಜು ಕುಸೋಜಿ ಮುಂತಾದವರು ಸೇರಿದ್ದಾರೆ. ಇದೇ ಬುಧವಾರ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ ಅವರೊಂದಿಗೂ ಮುಖಂಡರು ನೀರು ಬಿಡುಗಡೆ ಸಂಬಂಧ ಚಚರ್ೆ ನಡೆಸಲಿದ್ದಾರೆ.