ಕುಡಿಯುವ ನೀರಿಗಾಗಿ ರಸ್ತೆಯಲ್ಲಿ ಖಾಲಿ ಕೊಡಗಳನ್ನಿಟ್ಟು ಪ್ರತಿಭಟನೆ

ವಿಜಯಪುರ, 17 : ಕುಡಿಯುವ ನೀರಿನ ಸಮಸ್ಯೆ ಪರಿ ಹರಿಸುವಂತೆ ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ನಗರ ಗಾಂಧಿವೃತ್ತದಲ್ಲಿ ನಾವು ವಿನೂತನವಾಗಿ ಗಾಂಧಿವೃತ್ತದಲ್ಲಿ ಕಾಲಿ ಕೊಡಗಳನ್ನು ಇಟ್ಟು ಪ್ರತಿಭಟಿನೆ ನಡೆಸಲಾಯಿಒತು. 

ಪ್ರತಿಭಟನಾಕಾರರು ಖಾಳಿ ಕೊಡಗಳಿಗೆ ಕೃತಕ ನಳ ಜೋಡಿಸಿ ರಸ್ತೆಯಲ್ಲಿ ಮಲಗಿ ನಳಕ್ಕೆ ಬಾಯಿ ಹಾಕಿ ನೀರು ಕುಡಿಯುವ ಅಣಕು ಪ್ರದರ್ಶನ ಮಾಡಿ ನೀರು ಪೂರೈಕೆಯಲ್ಲಿ ತಾರತಮ್ಯ ಎಸಗುತ್ತಿರುವುದನ್ನು ಖಂಡಿಸಿದರು. 

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಜ್ಯೂ. ಗಣೇಶ (ಶಕ್ತಿ ಕುಮಾರ) ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 15 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವುದರಿಂದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ನಗರದಾದ್ಯಂತ ಕುಡಿಯುವ ನೀರಿನ ತೊಂದರೆ ಹೆಚ್ಚಾಗಿದೆ. ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಜಿಲ್ಲಾಧಿಕಾರಿಗಳು, ಕರ್ನಾಟಕ  ನೀರು ಸರಬರಾಜ ಹಾಗೂ ಒಳಚರಂಡಿ ಮಂಡಳಿ ಇಲಾಖೆಯ ನಿರ್ಲಕ್ಷ್ಯತನವೇ ಕಾರಣ ಎಂದು ದೂರಿದರು.

 15 ದಿನಕ್ಕೆ ಬರುವ ನೀರಿನಲ್ಲಿ ಬುರುಗಿನ ಅಂಶ ಕಾಣುತ್ತಿದೆ. ನೀರು ಗಲೀಜಾಗಿ ಬರುತ್ತಿದೆ. ಆ ನೀರನ್ನು ಸೇವಿಸುವದರಿಂದ ರೋಗ ರುಜಿನಗಳು ಜನರಿಗೆ ಹರಡುವ ಸಾಧ್ಯತೆ ಇದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಬೇಜವಾಬ್ದಾರಿ ಕೆಲಸ ನಿರ್ವಹಿಸುತ್ತಿರುವ ಸಂಬಂಧಪಟ್ಟ ಇಲಾಖೆಯವರ ಮೇಲೆ ಕ್ರಮ ತೆಗೆದುಕೊಂಡು 2 ದಿನಕ್ಕೊಮ್ಮೆ ನೀರನ್ನು ಬಿಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಆಗ್ರಹಿಸಿದರು.

ಯೋಗಗುರು ಪರಶುರಾಮ ಜಾಲಗಾರ, ಸೈಯ್ಯದ ಖಾದ್ರಿ ಶೇಖ ಜುಮನಾಳ, ಸಾಬು ವಾಗ್ಮಡಿ ಜುಮನಾಳ, ಡಾ. ಎಸ್.ಎ.ಮನಗೂಳಿ, ಅಭಿಷೇಕ ಗಸ್ತಿ, ಆಕಾಶ ಗಸ್ತಿ, ಅಜಯ, ರೋಹನ ಚೋಟು, ಮಾರುತಿ ಜಾಲಗಾರ, ಕೃಷ್ಣಾ ಕಲಾದಗಿ, ಯಾಸೀನ ಪಾಂಡು, ಜುಬೇರ ಮಕಾವದಾರ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.