ನಿವೃತ್ತ್‌ ದಿನಗೂಲಿ ನೌಕರರಿಗೆ ಪಿಂಚಣಿ ಜಾರಿಗೊಳಿಸುವಂತೆ ಪ್ರತಿಭಟನೆ

Protest to implement pension for retired daily wage workers

ಬೆಳಗಾವಿ 17: ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಅಧಿನಿಯಮ 2012 ರನ್ವಯ ಏ.10 1996ರ ಹಿಂದಿನಿಂದ ಪ್ರಸ್ತುತ ಸಾಲಿನ ವರಗೆ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರ ನಿವೃತ್ತಿ ಹೊಂದಿರುವ ನೌಕರರಿಗೆ ಪಿಂಚಣಿ ಜಾರಿಗೊಳಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. 

7ನೇ ವೇತನ ಜಾರಿಗೂ ಮೊದಲು ಸರಕಾರಿ ನೌಕರರಿಗೆ ಜಾರಿಗೊಳಿಸಿದ ತಾತ್ಕಾಲಿಕ ಪರಿಹಾರ ಶೇ.17ರಷ್ಟು ನೀಡಲಾಗಿದೆ ಆದರೆ, ಒಟ್ಟೂ ಶೇ.27 ಪರಿಹಾರ ವ್ಯತ್ಯಾಸ ನೀಡಬೇಕು. ಆರೋಗ್ಯವಿಮೆ ನೀಡಬೇಕು.ಸಕಕಾರಿ ಆದೇಶದನ್ವಯ ಗಳಿಕೆ ರಜೆ ಅರ್ಹರು ಎಂದು ತಿಳಿಸಿದ್ದರೂ ನೌಕರರಿಗೆ ರಜೆ ಒಪ್ಪಿಸಿ ನಗದು ಪಡೆಯಲು ಅವಕಾಶ ಇಲ್ಲ. ಹೀಗಾಗಿ ಗಳಿಕೆ ರಜೆ ಉಳಿತಾಯಕ್ಕೆ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. 

ಈ ವೇಳೆ ರಾಜ್ಯ ಅಧ್ಯಕ್ಷ ಚಂದ್ರ​‍್ಪ ಹೆಚ್, ರಾಜ್ಯ ಉಪಾಧ್ಯಕ್ಷ ಹರೀಶ್ ಎಸ್‌. ಎಸ್, ಪ್ರಧಾನ ಕಾರ್ಯದರ್ಶಿ ಎಸ್‌. ಶಿವಣ್ಣ  ಸೇರಿದಂತೆ ಇತರರು ಇದ್ದರು.